ಕಾಸರಗೋಡು ಕೋ-ಆಪರೇಟಿವ್ ಟೌನ್‌ಬ್ಯಾಂಕ್‌ನ ನವೀಕೃತ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನೆ

ಕಾಸರಗೋಡು: ಕಾಸರಗೋಡು ಕೋ-ಆಪರೇಟಿವ್ ಟೌನ್‌ಬ್ಯಾಂಕ್‌ನ ನವೀಕೃತ ಪ್ರಧಾನ ಕಚೇರಿ ಕಟ್ಟಡವನ್ನು ಕೇಂದ್ರ ಅಲ್ಪ ಸಂಖ್ಯಾತ ಕ್ಷೇಮ ಸಹಸಚಿವ ಜೋರ್ಜ್ ಕೊರಿಯನ್ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು.  ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ್ ಕೆ. ಪ್ರಭಾಕರ್ ಮಾಸ್ತರ್, ಕಾಞಂಗಾಡ್ ಜಿಲ್ಲಾ ಸಂಘ ಚಾಲಕ್ ಕೆ. ದಾಮೋದರನ್, ಸಹಕಾರಿ ಸಂಘ ಇನ್ಸ್‌ಪೆಕ್ಟರ್ ಕೆ. ಮಣಿಕಂಠನ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕೃಷಿ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಕಣ್ಣನ್, ನಗರಸಭಾ ಕೌನ್ಸಿಲರ್ ಶ್ರೀಲತಾ ಎಂ., ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರ್, ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘದ ಅಧ್ಯಕ್ಷ ಪಿ. ಮುರಳೀಧರನ್, ನಿರ್ದೇಶಕ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಉಪಾಧ್ಯಕ್ಷ ಮಾಧವ ಹೇರಳ ಸ್ವಾಗತಿಸಿ, ಸಿಇಒ ಆರ್.ವಿ. ಸುರೇಶ್ ಕುಮಾರ್ ವಂದಿಸಿದರು.

You cannot copy contents of this page