ಕುಂಜತ್ತೂರು ಮಹದನುಲ್ ಉಲೂಂ ಮದ್ರಸದ ಸುವರ್ಣ ಮಹೋತ್ಸವ ಅಂಗವಾಗಿ ಸಭಾ ಕಾರ್ಯಕ್ರಮ

ಮಂಜೇಶ್ವರ: ಕುಂಜತ್ತೂರು ಜುಮಾ ಮಸೀದಿಯ ಅಧೀನದಲ್ಲಿ ರುವ ಮಹದನುಲ್ ಉಲೂಂ ಮದ್ರಸದ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿ ಕೊಳ್ಳಲಾಗಿರುವ ನಾಲ್ಕು ದಿವಸಗಳ ಧಾರ್ಮಿಕ ಸಬೆs ಉದ್ಘಾಟನೆಗೊಂಡಿತು. ಮಸೀದಿ ಅಧ್ಯಕ್ಷ ಸಯ್ಯದ್ ಚಕ್ಕೂರ್ ಧ್ವಜಾ ರೋಹಣಗೈದು ಸುವರ್ಣ ಮಹೋ ತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಯ್ಯದ್ ಚಕ್ಕೂರ್‌ರವರ ಅಧ್ಯಕ್ಷತೆ ಯಲ್ಲಿ ನಡೆದ ಸಬೆsಯನ್ನು ಮಂಜೇಶ್ವರ ಸಂಯುಕ್ತ ಜಮಾಯತ್ ಅಧ್ಯಕ್ಷ ಸಯ್ಯದ್ ಅತ್ತಾವುಲ್ಲ ತಂಙಲ್ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಉಪಸ್ಥಿತರಿದ್ದÄ, ಹಳೆ ವಿದ್ಯಾರ್ಥಿ ಸಂಘದ ಲಾಂಛನ ವನ್ನು ಅನಾವರಣಗೊಳಿಸಿದರು. ಡಾ. ಕೆ. ಎ ಖಾದರ್, ಮೊಯಿದಿನ್ ಕುಂಞ, ಮೊಯಿದಿನ್ ಪ್ರಿಯ, ಉಸ್ಮಾನ್ ಕುಂಜತ್ತೂರು, ಎಸ್.ಕೆ ಹನೀಫ್, ಬಾವ ಕೆ.ಕೆ, ಅದ್ದು ಹಾಜಿ, ಅಬೂಬಕ್ಕರ್ ಭಾವ, ನಿಝಾಂ ಎಂ ಎ ಕೆ, ಕುಂಞ ಮೋನು ಸೇರಿ ದಂತೆ ಹಲವು ಗಣ್ಯರು ಉಪÀಸ್ಥಿತ ರಿದ್ದರು. ಸುಬೈರ್ ಮಾಸ್ಟರ್ ತೋ ಟಕ್ಕಲ್ ಹಾಗೂ ತಂಡದಿAದ ಸಾಂಸ್ಕÈತಿಕ ಕಾರ್ಯಕ್ರಮ ನಡೆಯಿತು. ಮಸೀದಿ ಖತೀಬ್ ಹಾಶಿರ್ ಹಾಮಿದ್ ಸ್ವಾಗತಿಸಿ, ವಂದಿಸಿದರು. ನಾಳೆ ಸಮಾರಂಭ ಸಮಾಪ್ತಿಗೊಳ್ಳಲಿದೆ.

RELATED NEWS

You cannot copy contents of this page