ಕಾಸರಗೋಡು: ವಾಸಿಯಾ ಗದ ಕಾಲುನೋವು ಹಿನ್ನೆಲೆಯಲ್ಲಿ ಮನನೊಂದು ಖಾಸಗಿ ಆಸ್ಪತ್ರೆಯ ನೌಕರೆ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೂಡ್ಲು ಮೀಪುಗುರಿ ಕಾಳ್ಯಂಗಾಡು ದೇವಿಕೃಪ ನಿವಾಸಿ ಸೂರ್ಯ ಎಂಬವರ ಪತ್ನಿ ಶ್ಯಾಮಲ (50) ಆತ್ಮಹತ್ಯೆಗೈದವರು. ನಿನ್ನೆ ಸಂಜೆ 4 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ಯಾಮಲ ಪತ್ತೆಯಾಗಿದ್ದಾರೆ. ಈಕೆ ಕಾಲು ನೋವಿನಿಂದ ಬಳಲುತ್ತಿದ್ದುದಾಗಿ ಹೇಳಲಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದು, ಇದಾಗಿರಬಹುದು ಆತ್ಮಹತ್ಯೆಗೆ ಕಾರಣವೆಂದು ಶಂಕಿಸುತ್ತಿರು ವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ನಗರ ಠಾಣೆ ಪೊಲೀರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.
ಮೃತರು ಪತಿ, ಮಕ್ಕಳಾದ ಸುಸ್ಮಿತ, ಸುಶಾಂತ್, ಅಳಿಯ ಸಂದೀಪ್, ಸೊಸೆ ಅಭಿರಾಮಿ, ಸಹೋದರ- ಸಹೋದರಿ ಯರಾದ ಪುಷ್ಪರಾಜ್, ಜನಾರ್ದನನ್, ಪದ್ಮಾವತಿ, ಅಂಬಿಕ, ಸುಮಲತ, ರಾಘವನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






