ಕುಂಬಳೆಯಿಂದ ಮುಡಿಪುಗೆ ಮಲೆನಾಡು ಹೆದ್ದಾರಿಯಲ್ಲಿ ಬಸ್ ಸಂಚಾರ ಆರಂಭ
ಸೀತಾಂಗೋಳಿ: ಉತ್ತಮ ರಸ್ತೆ ಇದ್ದರೂ ಮಲೆನಾಡು ಹೆದ್ದಾರಿ ಮೂಲಕ ಬಸ್ ಸಂಚಾರವಿಲ್ಲ ಎಂಬ ಗ್ರಾಮೀಣ ಜನರ ಹಲವು ಕಾಲದ ಬೇಡಿಕೆಗೆ ಪರಿಹಾರ ಉಂಟಾಗಿದೆ. ಇಂದಿನಿAದ ಎರಡು ಖಾಸಗಿ ಬಸ್ಗಳು ಮಲೆನಾಡು ಹೆದ್ದಾರಿಯ ಮೂಲಕ ಸಂಚಾರ ನಡೆಸಲಿವೆ. ಶಾಸಕರು ಸೂಚಿಸಿದಂತೆ ಖಾಸಗಿ ಬಸ್ ಕಂಪೆನಿಯಾದ ಮಹಾಲಕ್ಷ್ಮೀ ಟ್ರಾವೆಲ್ಸ್ನ ಮಾಲಕ ಪೆರ್ಲದ ವಿಠಲ ಶೆಟ್ಟಿ ತಮ್ಮ ಎರಡು ಬಸ್ಗಳನ್ನು ಕುಂಬಳೆಯಿAದ ಸೀತಾಂಗೋಳಿ ಮೂಲಕ ಮುಡಿಪುಗೆ ಸಂಚಾರ ಆರಂಭಿಸಲು ತೀರ್ಮಾನಿಸಿದ್ದಾರೆ. ಕಾಸರಗೋಡು ಹಾಗೂ ಕುಂಬಳೆಯಿAದ ಸಂಚಾರ ಆರಂಭಿಸುವ ಬಸ್ಗಳು ಸೀತಾಂಗೋಳಿಯಿAದ ಅಂಗಡಿಮೊಗರು, ಚೇವಾರು, ಪೈವಳಿಕೆ, ಮೀಯಪದವು, ಮೊರತ್ತಣೆ, ಸುಂಕದಕಟ್ಟೆ ಮೂಲಕ ನಂದರಪದವು ತಲುಪಿ ಅಲ್ಲಿಂದ ಮುಡಿಪುಗೆ ಸಂಚರಿಸಲಿದೆ. ಮರಳಿ ಅದೇ ದಾರಿಯಾಗಿ ಬಸ್ಗಳು ವಾಪಸಾಗಲಿವೆ. ಒಟ್ಟು ನಾಲ್ಕು ಟ್ರಿಪ್ಗಳು ಈ ರಸ್ತೆಯಲ್ಲಿ ಸಂಚರಿಸಲಿದೆ.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ, ಸಚಿವರಲ್ಲಿ ಹಲವು ಬಾರಿ ಸ್ಥಳೀಯರು ಆಗ್ರಹಿಸಿಯೂ ಬಸ್ ಇಲ್ಲ ಎಂಬ ಕಾರಣದಿಂದ ಅದನ್ನು ಪರಿಗಣಿಸಿರಲಿಲ್ಲ. ಬಳಿಕ ಕರ್ನಾಟಕ ಸರಕಾರಿ ಬಸ್ಗಾಗಿ ಮನವಿ ನೀಡಿದರೂ ಅದೂ ಸಾಕಾರಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಬಸ್ ಮಾಲಕರು ಈ ದಾರಿಯಾಗಿ ಸಂಚಾರ ನಡೆಸಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಕಳೆದ ಸೆಪ್ಟಂಬರ್ನಲ್ಲಿ ಪತ್ರ ನೀಡಲಾಗಿತ್ತು. ಬಳಿಕ ಈ ಬಗ್ಗೆ ತಾಲೂಕು ಅಭಿವೃದ್ಧಿ ಸಮಿತಿಯಲ್ಲಿ ಚರ್ಚಿಸಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.
ಬೆಳಿಗ್ಗೆ 7.12ಕ್ಕೆ ಕುಂಬಳೆಯಿAದ ಹೊರಡುವ ಬಸ್ 9.30ಕ್ಕೆ ಮುಡಿಪುಗೆ ತಲುಪಿ 10.20ಕ್ಕೆ ಅಲ್ಲಿಂದ ಹಿಂತಿರುಗಲಿದೆ. ಇದು ಮಧ್ಯಾಹ್ನ 12.50ಕ್ಕೆ ಕಾಸರಗೋಡಿಗೆ ತಲುಪುತ್ತಿದ್ದು, 1.15ಕ್ಕೆ ಮತ್ತೆ ಸಂಚಾರ ನಡೆಸಲಿದೆ. 3.40ಕ್ಕೆ ಮುಡಿಪುಗೆ ತಲುಪುವ ಈ ಬಸ್ 4.10ಕ್ಕೆ ಅಲ್ಲಿಂದ ಹೊರಟು ಸಂಜೆ 6.38ಕ್ಕೆ ಕಾಸರಗೋಡಿಗೆ ತಲುಪುತ್ತದೆ. 6.45ಕ್ಕೆ ಹೊರಟು 7.30ಕ್ಕೆ ಕುಂಬಳೆಯಲ್ಲಿ ನಿಲುಗಡೆಹೊಂದಲಿದೆ. ಇನ್ನೊಂದು ಬಸ್ ಬೆಳಿಗ್ಗೆ 6.25ಕ್ಕೆ ಪೆರ್ಮುದೆಯಿಂದ ಹೊರಟು 7.23ಕ್ಕೆ ಕಾಸರಗೋಡಿಗೆ ತಲುಪಿ ಬಳಿಕ 7.42ಕ್ಕೆ ಹೊರಟು 10.30ಕ್ಕೆ ಮುಡಿಪುಗೆ ತಲುಪುತ್ತದೆ. ಅಲ್ಲಿಂದ 11.30ಕ್ಕೆ ಹೊರಟು ಮಧ್ಯಾಹ್ನ 1.48ಕ್ಕೆ ಕಾಸರಗೋಡಿಗೆ ತಲುಪಿ ಮತ್ತೆ ಮುಡಿಪುಗೆ ಸಂಚರಿಸುತ್ತದೆ.