ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ವೇದಿಕೆ ಸ್ಪರ್ಧೆಗಳು ಆರಂಭ

ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಡರಿ ಶಾಲೆಯಲ್ಲಿ ನಡೆಯುತ್ತಿದ್ದು, ಇಂದಿನಿಂದ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 2.30ಕ್ಕೆ ಕಲೋತ್ಸವದ ಔಪಚಾರಿಕ ಉದ್ಘಾಟನೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನೆರವೇರಿಸುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. 93 ಶಾಲೆಗಳ 7000ಕ್ಕೂ ಅಧಿಕ ಮಕ್ಕಳು 16 ವೇದಿಕೆಗಳಲ್ಲಿ ಪ್ರತಿಭೆ ಮೆರೆಸುವರು. 20ರಂದು ಕಲೋತ್ಸವ ಸಮಾಪ್ತಿಯಾಗಲಿದೆ.

You cannot copy contents of this page