ಕುಂಬಳೆ: ಕುಂಬಳೆ ಪೇಟೆಯ ಜಂಕ್ಷನ್‌ನಲ್ಲಿ ನಿರ್ಲಕ್ಷ್ಯವಾಗಿ ವಾಹನ ಗಳನ್ನು ನಿಲುಗಡೆಗೊಳಿಸು ತ್ತಿರುವುದು ಸಾರಿಗೆ ಅಡಚಣೆಗೆ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವಂತೆ ಜಂಕ್ಷನ್‌ನ ವಿವಿಧೆಡೆ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದಾಗಿ ವ್ಯಾಪಕ ದೂರುಗಳು ಕೇಳಿಬರುತ್ತಿದೆ. ತಲಪ್ಪಾಡಿ-ಕಾಸರಗೋಡು ಭಾಗದಿಂದ ಬರುವ ವಾಹನಗಳು ಕುಂಬಳೆ ಪೇಟೆಗೆ ಪ್ರವೇಶಿಸುವುದು ಹಾಗೂ ಹಲವು ವಾಹನಗಳು ಕಾಸರ ಗೋಡು ಭಾಗಕ್ಕೆ ತೆರಳುವುದು, ಬಸ್ ನಿಲ್ದಾಣದಿಂದ ಬಸ್ಸುಗಳು ತಲಪ್ಪಾಡಿ, ಮಂಗಳೂರು, ಕಾಸರಗೋಡು ಭಾಗಕ್ಕೆ ತೆರಳುತ್ತಿರುವಾಗ ಸಾರಿಗೆ ಅಡಚಣೆ ತೀವ್ರಗೊಳ್ಳುತ್ತಿದೆ. ಚಾಲಕರು ಇಲ್ಲಿ ಯಾವ ಭಾಗಕ್ಕೆ ವಾಹನವನ್ನು ತಿರುಗಿಸಬೇಕೆಂದು ತೀವ್ರ ಗೊಂಡಲಕ್ಕೀಡಾಗುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪೊಲೀ ಸರು ಇದ್ದರು ಕೂಡಾ ಜಂಕ್ಷನ್‌ನಲ್ಲಿ ಸೃಷ್ಟಿಯಾಗುತ್ತಿ ರುವ ಸಾರಿಗೆ ಅಡಚಣೆ ನಿವಾರಿಸಲು ಕ್ರಮ ಕೈಗೊಳ್ಳುತ್ತಿಲ್ಲ ವೆಂದು ದೂರಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೊನೆಗೊ ಳ್ಳಲು ಇನ್ನೂ ಹಲವು ತಿಂಗಳುಗ ಳಿವೆ. ಅದುವರೆಗೂ ಈ ಸಾರಿಗೆ ಅಡಚಣೆ ಯನ್ನು ಸಹಿಸಿಕೊಳ್ಳಬೇಕೇ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
