ಕುಂಬಳೆ ಬಳಿ ಮರಕ್ಕೆ ಢಿಕ್ಕಿ ಹೊಡೆದು ಮಗುಚಿದ ಕಾರು: 5 ಮಂದಿಗೆ ಗಾಯ

ಕುಂಬಳೆ: ಕುಂಬಳೆ ಸಮೀಪ ಕೆಎಸ್‌ಟಿಪಿ ರಸ್ತೆಯಲ್ಲಿ ಇನ್ನೋವ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಬೋವಿಕ್ಕಾನ ನಿವಾಸಿಗಳಾದ ಐದು ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಗೆ ಭಾಸ್ಕರನಗರದಲ್ಲಿ ಅಪಘಾತವುಂ ಟಾಗಿದೆ. ಬೋವಿಕ್ಕಾನ ನಿವಾಸಿಗಳಾ ದ ಸಾದತ್ (30), ಬದರುದ್ದೀನ್ (23), ರುಖಿಯ (50), ಆಯಿಶ (42), ತಸ್ಲಿಯ (23) ಎಂಬಿವರು ಗಾಯಗೊಂಡಿದ್ದು, ಇವರನ್ನು ಕುಂಬಳಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರು ಪ್ರಯಾಣಿಕರು ಬೋವಿಕ್ಕಾನದಿಂದ ಮಂಗಳೂರಿಗೆ ತೆರಳುತ್ತಿದ್ದರು. ಮಳೆ ಸುರಿಯುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ಶಬ್ದ ಕೇಳಿ ತಲುಪಿದ ನಾಗರಿಕರು ಕಾರಿನೊಳಗೆ ಸಿಲುಕಿದವರನ್ನು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದ್ದಾರೆ. ಮಳೆಗಾಲ ಆರಂಭಗೊಂಡ ಬಳಿಕ ಒಂದು ತಿಂಗಳಲ್ಲಿ ಈ ರಸ್ತೆಯಲ್ಲಿ ಹಲವು ಅಪಘಾ ತಗಳು ಸಂಭವಿಸಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

RELATED NEWS

You cannot copy contents of this page