ಪತ್ನಿಯ ನಿಧನದಿಂದ ಮನನೊಂದಿದ್ದ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪತ್ನಿ ನಿಧನ ಹೊಂದಿದುದರಿಂದ ಮನನೊಂದಿದ್ದ ಪತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ.  ಪನತ್ತಡಿ ಕೋಳಿಚ್ಚಾಲ್ ಪ್ರಾಂದರ್ಕಾವ್ ಒನಿಯನ್ ಹೌಸ್‌ನ ಸಜೀವನ್ (60) ಮೃತಪಟ್ಟ ವ್ಯಕ್ತಿ.  ಘಟನೆಗೆ ಸಂಬಂಧಿಸಿ ರಾಜಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಜೀವನ್‌ರ ಪತ್ನಿ ಬಿ.ವಿ. ಶೋಭನ (53) ಫೆ. 3ರಂದು ನಿಧನಹೊಂದಿದ್ದರು.  ಜನವರಿ 28ರಂದು ರಾತ್ರಿ ಮನೆಯಲ್ಲಿ ಇಲಿಯನ್ನು ಕೊಲ್ಲಲು ವಿಷವಿರಿಸುತ್ತಿದ್ದಾಗ  ಅಕಸ್ಮಾತ್ ಗ್ಲಾಸ್‌ಗೆ ಸ್ವಲ್ಪ ವಿಷ ಬಿದ್ದಿದ್ದು ಅದನ್ನು ತಿಳಿಯದೆ ಗ್ಲಾಸ್‌ನಲ್ಲಿದ್ದ ನೀರನ್ನು ಅವರು ಕುಡಿದಿದ್ದರು.  ಅನಂತರ ಅಸ್ವಸ್ಥಗೊಂಡಾಗಲೇ ವಿಷಯ ಅರಿವಿಗೆ ಬಂದಿದೆ.  ಇದರಿಂದ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶೋಭನ ಮೃತಪಟ್ಟಿದ್ದರು.  ಪತ್ನಿಯ ಅಕಾಲಿಕ ನಿಧನದಿಂದ ಸಜೀವನ್ ತೀವ್ರ ಮನನೊಂದಿದ್ದರೆನ್ನಲಾಗಿದೆ. ಇದುವೇ ಇವರು ನೇಣುಬಿಗಿದು ಸಾವಿಗೆ ಶರಣಾಗಲು ಕಾರಣವೆಂದು ಸಂಶಯಿಸಲಾಗುತ್ತಿದೆ. ಮೃತರು ಮಕ್ಕಳಾದ ಸನೀಶ್, ಸಚಿತ್ರ,  ಅಳಿಯ ಸನೀಶ್, ಸೊಸೆ ಶಾಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page