ಜಿಲ್ಲೆಯ 5 ಮಂಡಲಗಳಲ್ಲೂ ಅಭ್ಯರ್ಥಿಗಳ ಚಿತ್ರ ಸ್ಪಷ್ಟ: ಇನ್ನು ಹೋರಾಟದ ದಿನಗಳು

ಕಾಸರಗೋಡು: ಉದುಮ, ತೃಕರಿಪುರ ವಿಧಾನಸಭಾ ಮಂಡಲಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದರೊಂದಿಗೆ ಜಿಲ್ಲೆಯ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಿದೆ. ಮಂಜೇಶ್ವರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕೆ. ಸುರೇಂದ್ರನ್, ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್‌ನ ಎಕೆಎಂ ಅಶ್ರಫ್, ಎಡರಂಗ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಈಗಾಗಲೇ ರಂಗಕ್ಕಿಳಿದಿದ್ದಾರೆ.

ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಅನಿಶ್ಚಿತತೆಯ ಕೊನೆಯಲ್ಲಿ ಲೀಗ್ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಬಿಜೆಪಿ, ಎಡರಂಗದ ಅಭ್ಯರ್ಥಿಗಳನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಉದುಮದಲ್ಲಿ ಎಡರಂಗದ ಅಭ್ಯರ್ಥಿ ಸಿ.ಎಚ್. ಕುಂಞಂಬು ಎರಡನೇ ಬಾರಿ ಹೋರಾಟ ನಡೆಸುತ್ತಿದ್ದು, ಪ್ರಧಾನ ಪ್ರತಿಸ್ಪರ್ಧಿಯಾಗಿ ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ರಂಗಕ್ಕಿಳಿಯುವ ನಿರೀಕ್ಷೆ ಇದೆ. ಬಿಜೆಪಿ ಅಭ್ಯರ್ಥಿಯಾಗಿ ಮನು ಮೇಲತ್‌ರನ್ನು ಈಗಾಗಲೇ ಘೋಷಿಸಲಾಗಿದೆ. ಕಾಞಂಗಾಡ್‌ನಲ್ಲಿ ಗೋವಿಂದನ್ ಪಳ್ಳಿಕಾಪಿಲ್ ಎಡರಂಗದ ಅಭ್ಯರ್ಥಿಯಾಗಿಯೂ, ಬಲ್‌ರಾಜ್ ಬಿಜೆಪಿ ಅಭ್ಯರ್ಥಿಯಾಗಿಯೂ, ಕೇರಳ ಕಾಂಗ್ರೆಸ್‌ನ ಶೈಜು ಓಟಪ್ಪಳ್ಳಿ ಯುಡಿಎಫ್ ಅಭ್ಯರ್ಥಿಯಾಗಿ ರಂಗಕ್ಕಿಳಿದಿದ್ದಾರೆ.

ತೃಕರಿಪುರದಲ್ಲಿ ಎಡರಂಗದ ಅಭ್ಯರ್ಥಿ ಯಾಗಿ ವಿಪಿಪಿ ಮುಸ್ತಫ, ಐಕ್ಯರಂಗದ ಅಭ್ಯರ್ಥಿ ಯಾಗಿ ಸಂದೀಪ್ ವಾರ್ಯರ್, ಎನ್‌ಡಿಎ ಅಭ್ಯರ್ಥಿಯಾಗಿ ರವಿ ಕುಳಂಗರೆ ಸ್ಪರ್ಧಿಸುತ್ತಿದ್ದಾರೆ.

You cannot copy contents of this page