ಕೇಳುಗುಡ್ಡೆ ತ್ಯಾಜ್ಯಪ್ರದೇಶವನ್ನು ಉಪಯೋಗಪ್ರದ ಭೂಮಿಯನ್ನಾಗಿ ಮಾಡುವ ಯೋಜನೆಗೆ ಚಾಲನೆ

ಕಾಸರಗೋಡು: ಕೇಳುಗುಡ್ಡೆಯಲ್ಲಿ ರುವ ಡಂಪ್‌ಸೈಟ್ ಬಯೋ ರೆಮಡಿಯೇಶನ್ ಮಾಡಿ ಭೂಮಿಯನ್ನು ಸ್ವಚ್ಛಗೊಳಿಸುವ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ನಾಗ್ಪುರದ ಎಸ್‌ಎಂಎಸ್ ಲಿಮಿಟೆಡ್ ಎಂಬ ಕಂಪೆನಿ ಹಾಗೂ ಕೆಎಸ್‌ಡಬ್ಲ್ಯುಎಂಪಿ ಮಧ್ಯೆ ಈ ಯೋಜನೆಗೆ ಬೇಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಸುಮಾರು 1.1 ಎಕ್ರೆಯಲ್ಲಾಗಿ16573 ಮೆಟ್ರಿಕ್ ಟನ್‌ಗಿಂತಲೂ ಅಧಿಕವಿರುವ ತ್ಯಾಜ್ಯವನ್ನು ತೆರವುಗೊಳಿಸಿ  ಭೂಮಿ ಯನ್ನು ಉಪಯೋಗಪ್ರದಗೊಳಿಸುವುದಕ್ಕೆ ಬೇಕಾಗಿ 3.53 ಕೋಟಿ ರೂ.ವನ್ನು ಕೆಎಸ್‌ಡಬ್ಲ್ಯುಎಂಪಿ ಮೀಸಲಿಟ್ಟಿದೆ. ಯೋಜನೆಯ ಉದ್ಘಾಟನೆ ಇಂದು ಬೆಳಿಗ್ಗೆ ಕೇಳುಗುಡ್ಡೆಯಲ್ಲಿ ನಡೆಯಿತು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page