ಕೊಟ್ಟಂಗುಳಿಯಲ್ಲಿ ಮತ್ತೆ ಕಾಡಾನೆ ಹಾವಳಿ

ಮುಳ್ಳೇರಿಯ: ಮುಳಿಯಾರು, ಕೊಟ್ಟಂಗುಳಿಯಲ್ಲಿ ನಿರಂತರ ಮೂರನೇ ದಿನ  ಕಾಡಾನೆಯೊಂದು ವ್ಯಾಪಕ  ಭಯ ಹುಟ್ಟಿಸುತ್ತಿದೆ. ಮನೆಗಳ ಸಮೀಪಕ್ಕೆ ತಲುಪಿ ಆನೆ ಘೀಳಿಡುತ್ತಿದ್ದು ಇದರಿಂದ ಮನೆ ಮಂದಿ ಭಯಭೀತರಾಗುತ್ತಿದ್ದಾರೆ. ನಿನ್ನೆ ರಾತ್ರಿ 7.30 ವೇಳೆ ಕೊಟ್ಟಂಗುಳಿಯ ಚಂದ್ರನ್ ಎಂಬವರ ರಬ್ಬರ್ ತೋಟಕ್ಕೆ ಆನೆ ತಲುಪಿದೆ. ಅಲ್ಲಿಂದ ಮುಂದೆ ಸಾಗಿದ ಆನೆ ಮನೆ ಸಮೀಪಕ್ಕೆ ತಲುಪಿ ಘೀಳಿಡತೊಡಗಿದೆ. ಇದರಿಂದ ಭಯಗೊಂಡ ಮನೆಯವರು ನಾಗರಿಕರಿಗೆ ವಿಷಯ ತಿಳಿಸಿದ್ದು, ಬಳಿಕ ಆನೆಯನ್ನು ಕಾಡಿನತ್ತ ಓಡಿಸಲಾಯಿತು.

RELATED NEWS

You cannot copy contents of this page