ಕೊಲೆ ಪ್ರಕರಣದ ಆರೋಪಿಯನ್ನು ಕೊಲೆಗೈಯ್ಯಲು ಸಂಚು: ತಂಡ ಸೆರೆ

ಪುತ್ತೂರು: ಕೊಲೆ ಪ್ರಕರಣದ ಆರೋಪಿಯ ಸಹೋದರನನ್ನು  ಇರಿದು ಕೊಲೆಗೈಯ್ಯಲು ತಲವಾರಿನೊಂದಿಗೆ ಸಂಚರಿಸುತ್ತಿದ್ದಾಗ  ಬೇರೊಂದು ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ  ಯುವಕ ಹಾಗೂ  ಸಹಚರರನ್ನು ಸೆರೆಹಿಡಿಯಲಾಗಿದೆ. ವಿಟ್ಲ ಕಲ್ಲಡ್ಕದ ಕಿಶೋರ್ ಪೂಜಾರಿ (೩೬), ಮನೋಜ್ (೨೩), ಆಶಿಕ್ (೨೮), ಸನತ್ ಕುಮಾರ್ (೨೪) ಎಂಬಿವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

೨೦೨೨ ಜೂನ್ ೪ರಂದು ರಾತ್ರಿ ಪೆರ್ಲಂಪಾಡಿಯ ಚರಣ್‌ರಾಜ್ ರೈ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಕಿಶೋರ್ ಪೂಜಾರಿ ಆರೋಪಿಯಾಗಿದ್ದಾನೆನ್ನಲಾಗಿದೆ.  ಪ್ರಸ್ತುತ ಪ್ರಕರಣದಲ್ಲಿ ಸೆರೆಗೀಡಾಗಿ ಜೈಲಿನಲ್ಲಿದ್ದ ಈತ ಇತ್ತೀಚೆಗೆ ಬಿಡುಗಡೆಗೊಂಡಿದ್ದನು. ೨೦೨೩ ನವಂಬರ್ ೬ರಂದು ರಾತ್ರಿ ಪುತ್ತೂರಿನ ಪ್ರಮುಖ ಹುಲಿಕುಣಿತ ತಂಡದ ಮಾಲಕನಾದ ಅಕ್ಷಯ್ ಕಲ್ಲೇಗ (೨೬)ರನ್ನು ತಂಡವೊಂದು ಇರಿದು ಕೊಲೆಗೈದಿತ್ತು. ಪ್ರಸ್ತುತ ಪ್ರಕರಣದಲ್ಲಿ ನಾಲ್ಕು ಮಂದಿ ಸೆರೆಗೀಡಾಗಿದ್ದರು.

RELATED NEWS

You cannot copy contents of this page