ಗಲ್ಫ್ ಉದ್ಯೋಗಿ ಮನೆಯಿಂದ ಕಳವಿಗೆ ಯತ್ನ

ಕುಂಬಳೆ: ಗಲ್ಫ್‌ಉದ್ಯೋಗಿಯ ಮನೆಯಲ್ಲಿ ಕಳ್ಳರು ಕಳವಿಗೆ ಯತ್ನಿಸಿ ವಿಫಲಗೊಂಡ ಘಟನೆ ನಡೆದಿದೆ. ಮೊಗ್ರಾಲ್‌ನಲ್ಲಿ ಲೀಗ್ ಕಚೇರಿ ಬಳಿಯ ಪಾರಿಸ ಅಬ್ದುಲ್ಲ ಎಂಬವರ ಮನೆಯಿಂದ ಕಳವಿಗೆ  ಯತ್ನ ನಡೆದಿದೆ. ಪಾರಿಸ ಅಬ್ದುಲ್ಲ  ಕುಟುಂಬ ಸಮೇತ ಗಲ್ಫ್‌ನಲ್ಲಿದ್ದಾರೆ. ಇದರಿಂದ ಮನೆಯಲ್ಲಿ ಬೆಲೆಬಾಳುವ ಯಾವುದೇ ಸಾಮಗ್ರಿಗಳನ್ನು ಇರಿಸಲಿಲ್ಲ.   ಅಲ್ಲದೆ ಈ ಮನೆಗೆ ಬೀಗ ಜಡಿಯಲಾಗಿದೆ. ಮೊನ್ನೆ ಈ ಮನೆಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈಬಗ್ಗೆ ಪಾರಿಸ ಅಬ್ದುಲ್ಲರ ಸಂಬಂಧಿಕ ಮುಹಮ್ಮದ್ ಸಿದ್ದಿಕ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page