ಗಲ್ಫ್ ಉದ್ಯೋಗಿ ಮನೆಯಿಂದ 25 ಪವನ್ ಚಿನ್ನ, ದಿರ್ಹಾಂ ಕಳವು

ಕುಂಬಳೆ: ಗಲ್ಫ್ ಉದ್ಯೋಗಿಯ ಮನೆಗೆ ಕಳ್ಳರು ನುಗ್ಗಿ ಸುಮಾರು 25 ಪವನ್ ಚಿನ್ನದೊಡವೆ ಮತ್ತು ಧಿರ್ಹಾಂ ಕಳವುಗೈದ ಘಟನೆ ಇಲ್ಲಿಗೆ ಸಮೀಪದ ಶಾಂತಿಪಳ್ಳದಲ್ಲಿ ನಡೆದಿದೆ.

ಗಲ್ಫ್ ಉದ್ಯೋಗಿ ಶಾಂತಿಪಳ್ಳದ ಸುಬೈರ್ ಎಂಬವರ  ದ್ವಿ ಅಂತಸ್ತಿನ ಕಾಂಕ್ರೀಟ್ ಮನೆಯಲ್ಲಿ ಈ ಕಳವು ನಡೆದಿದೆ.  ರಂಜಾನ್ ಪ್ರಯುಕ್ತ ಸುಬೈರ್ ಕೆಲವು ದಿನಗಳ ಹಿಂದೆಯಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದಾರೆ.  ಉಳ್ವಾರ್‌ನಲ್ಲಿರುವ ಸಹೋದರಿ ಮುಶ್ರತ್‌ರ ಮನೆಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಲೆಂದು ಸುಬೈರ್ ತನ್ನ ಪತ್ನಿ, ಮಕ್ಕಳು ಮತ್ತು ತಾಯಿ ಜತೆ ನಿನ್ನೆ ಸಂಜೆ ಮನೆಗೆ ಬೀಗ ಜಡಿದು   ಹೋಗಿದ್ದರು. ಅಲ್ಲಿಂದ ಅಂದು ಬೆಳಿಗ್ಗೆ ಮನೆಗೆ ಹಿಂತಿರುಗಿದಾಗಲಷ್ಟೇ ಕಳವು ನಡೆದ ವಿಷಯ ಅವರ ಗಮನಕ್ಕೆ  ಬಂದಿದೆ. ಮನೆಯ ಎದುರುಗಡೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಮುರಿದು ಅದರೊಳಗಿದ್ದ ನಗ-ನಗದು ದೋಚಿದ್ದಾರೆ. ಕಪಾಟಿನೊಳಗಿದ್ದ  ಇತರ ಸಾಮಗ್ರಿಗಳನ್ನೆಲ್ಲಾ ಹೊರಕ್ಕೆಸೆದು  ಚೆಲ್ಲಾಪಿಲ್ಲಿಗೊಳಿ ಸಿದ್ದಾರೆ. ಈ ಬಗ್ಗೆ ನೀಡಿದ ಮಾಹಿತಿ ಯಂತೆ ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಟಿ.ಎಂ. ನಿತಿನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ   ಪರಿಶೀಲನೆ ನಡೆಸಿದೆ.  ಬೆರಳಚ್ಚು ತಜ್ಞರು ಮತ್ತು  ಶ್ವಾನದಳ  ಈ ಮನೆಗೆ ಬಂದು  ಅಗತ್ಯದ ಮಾಹಿತಿ  ಸಂಗ್ರಹಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page