ಠಾಣೆಗೆ ತಲುಪಿಸಿದ ಬಿದ್ದು ಸಿಕ್ಕಿದ ಮೊಬೈಲ್ ಕಳವುಗೈದು ಮಾರಾಟ ಮಾಡಿದ ಪೊಲೀಸ್

ಕಾಸರಗೋಡು: ಪೊಲೀಸ್ ಠಾಣೆಗೆ ನೀಡಿದ ಮೊಬೈಲ್ ಫೋನ್ ಕಳವುಗೈದು ಮಾರಾಟ ಮಾಡಿದ ಘಟನೆಯಲ್ಲಿ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ನೀರ್ಚಾಲು ನಿವಾಸಿ ವೈ. ಬೈಜು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಸ್‌ಐ ವಿಷ್ಣು ಎಸ್. ನಾಯರ್‌ರ ವರದಿಯ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್‌ರಾಜ್‌ರ ನಿರ್ದೇಶಾನುಸಾರ ಚಂದೇರ ಪೊಲೀಸ್ ಠಾಣೆಯ ಪೊಲೀಸ್ ಆಗಿರುವ ಬೈಜು ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ 8ರಂದು ಘಟನೆ ನಡೆದಿದೆ. ಅಂದು ರಾತ್ರಿ ವೇಳೆ ಬೈಜು ಕರ್ತವ್ಯದಲ್ಲಿದ್ದರು.  ಠಾಣೆ ಸಮೀಪವೇ ವಾಸಿಸುವ ಅನ್ಯರಾಜ್ಯ ಕಾರ್ಮಿಕನಿಗೆ 10,000 ರೂ. ಮೌಲ್ಯದ ರೆಡ್‌ಮಿ  ಮೊಬೈಲ್ ಫೋನ್ ಬಿದ್ದು ಸಿಕ್ಕಿತ್ತು. ಅದನ್ನು ಆತ ಪೊಲೀಸ್ ಠಾಣೆಗೆ ನೀಡಿದ್ದರು. ಇದರ ವಾರೀಸುದಾರನನ್ನು ಪತ್ತೆಹಚ್ಚಲು ಪುಸ್ತಕದಲ್ಲಿ ದಾಖಲಿಸಿದ್ದರು. ರಾಮಂತಳಿ ನಿವಾಸಿಯದ್ದಾಗಿತ್ತು ಮೊಬೈಲ್‌ಫೋನ್.  ಮರುದಿನ ಫೋನ್  ಪಡೆಯಲು ತಲುಪುವುದಾಗಿ ವಾರೀಸು ದಾರೆಯಾದ ಮಹಿಳೆ ಪೊಲೀಸರಲ್ಲಿ ತಿಳಿಸಿದ್ದರು. ಒಂದು ವಾರ ಕಳೆದು ಈಕೆ ಪುತ್ರನ ಜೊತೆ ಮೊಬೈಲ್ ಫೋನ್ ಪಡೆಯಲೆಂದು ಠಾಣೆಗೆ ತಲುಪಿದ್ದರು.

ಆ ವೇಳೆ ಡ್ರವರ್‌ನಲ್ಲಿರಿಸಿದ್ದ ಮೊಬೈಲ್ ಫೋನ್ ಕಳವುಹೋಗಿರುವ ಬಗ್ಗೆ ತಿಳಿದು ಬಂದಿದೆ. ಬಳಿಕ ಪೊಲೀಸರ ವಾಟ್ಸಪ್ ಗ್ರೂಪ್‌ನಲ್ಲಿ ಈ ಬಗ್ಗೆ ಸಂದೇಶವನ್ನು ಓರ್ವ ಪೊಲೀಸ್ ಹಾಕಿದ್ದರು.  ಫೋನನ್ನು ಯಾರಾದರೂ ತೆಗೆದಿರಿಸಿದ್ದರೆ ಅದನ್ನು ಕೂಡಲೇ ಹಿಂತಿರುಗಿ ಸಬೇಕೆಂದಾಗಿತ್ತು ಸಂದೇಶ. ಇದರಿಂದ ಫೋನ್ ಕಳವು ಹೋಗಿರುವುದಾಗಿ ಎಸ್‌ಐಗೆ ತಿಳಿದು ಬಂದಿದೆ. ಬಳಿಕ ಸೈಬರ್ ಸೆಲ್ ಮೂಲಕ ನಡೆಸಿದ ತನಿಖೆಯಲ್ಲಿ ಬದಿಯಡ್ಕದ ಓರ್ವ ಫೋನ್ ಉಪಯೋಗಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈತನನ್ನು ಸಂಪರ್ಕಿಸಿ ಠಾಣೆಗೆ ಕರೆಸಿ ತನಿಖೆ ನಡೆಸಿದಾಗ   ಪೊಲೀಸ್‌ನೋರ್ವ ತನಗೆ ಇದನ್ನು ಮಾರಾಟ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ತನಿಖೆ ನಡೆಸಿದಾಗ ಅಂದು ರಾತ್ರಿ ಕರ್ತವ್ಯದಲ್ಲಿದ್ದ ವ್ಯಕ್ತಿ ಬೈಜು ಎಂದು ತಿಳಿದು ಬಂದಿದೆ. ಅಲ್ಲದೆ ಮೊಬೈಲ್ ಫೋನ್ ತೆಗೆಯುವುದು, ಅದರಿಂದ ಸಿಮ್ ಕಾರ್ಡ್ ತೆಗೆಯುತ್ತಿರುದ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವರದಿ ತಯಾರಿಸಿ ಎಸ್‌ಐ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ್ದಾರೆ. ಅವರ ನಿರ್ದೇಶದಂತೆ ಇಂದು ಬೆಳಿಗ್ಗೆ ಪೊಲೀಸ್ ವಿರುದ್ಧ ಕಳವು ಪ್ರಕರಣ ದಾಖಲಿಸ ಲಾಗಿದೆ. “ಬೇಲಿಯೇ ಹೊಲ ಮೇಯ್ದಂತೆ”ಎಂಬ ಗಾದೆ ಮಾತು ಈ ಪ್ರಕರಣಕ್ಕೆ ಪ್ರತ್ಯಕ್ಷ ಪುರಾವೆಯಂತಾಗಿದೆ.

RELATED NEWS

You cannot copy contents of this page