ಟೂರಿಸ್ಟ್ ಬಸ್ ಗೋಡೆಗೆ ಢಿಕ್ಕಿ ಹೊಡೆದು ಅಪಘಾತ : ಆರು ಮಂದಿಗೆ ಗಾಯ

ಹೊಸದುರ್ಗ: ಟೂರಿಸ್ಟ್ ಮಿನಿ ಬಸ್ ಗೋಡೆಗೆ ಢಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡರು. ಇಂದು ಮುಂಜಾನೆ ೬.೪೫ಕ್ಕೆ ಚಿತ್ತಾರಿ ಚಾಮುಂಡಿಕುನ್ನ್‌ನಲ್ಲಿ ಅಪಘಾತ ಸಂಭವಿಸಿದೆ. ಚಾಮುಂಡಿಕುನ್ನ್ ನಿವಾಸಿ ಅಬ್ದುಲ್ ರಹ್ಮಾನ್‌ರ ಮನೆಯ ಆವರಣಗೋಡೆ ಹಾಗೂ ಸಮೀಪದ ಅಂಗಡಿಯ ಗೋಡೆ ಹಾನಿಗೊಂಡಿದೆ. ಚಾಲಕ ಸೇರಿದಂತೆ ಆರು ಮಂದಿ ಬಸ್‌ನಲ್ಲಿದ್ದರೆನ್ನಲಾಗಿದೆ. ಬಸ್‌ನಲ್ಲಿ ಸಿಲುಕಿಕೊಂಡ ಚಾಲಕ ನನ್ನು ಬಹಳ ತ್ರಾಸದಾಯಕವಾಗಿ ಸ್ಥಳೀಯರು ಹೊರತೆಗೆದಿದ್ದಾರೆ. ಮಲಪ್ಪುರಂನಿಂದ ಮಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಆಹಾರ ತಯಾರಿಸಲು ಹೋಗುವ ತಂಡದ ಬಸ್ ಅಪಘಾತಕ್ಕೀಡಾಗಿದೆ.

RELATED NEWS

You cannot copy contents of this page