ದೂರು ನೀಡಲು ತಲುಪಿದ ಯುವತಿಗೆ ನ್ಯಾಯವಾದಿಯಿಂದ ಕಿರುಕುಳ: ತನಿಖೆಗೆ ಸಮಿತಿ ರೂಪೀಕರಣ

ಕಾಸರಗೋಡು: ವಿವಾಹ ವಿಚ್ಛೇಧನೆ ಕುರಿತು ದೂರು ನೀಡಲು  ತಲುಪಿದಾಗ ನ್ಯಾಯವಾದಿ ಕಿರುಕುಳ ನೀಡಿದನೆಂದು ಯುವತಿ ನೀಡಿದ ದೂರಿನ ಕುರಿತು ತನಿಖೆ ನಡೆಸಲು ಕಾಸರಗೋಡು ಬಾರ್ ಅಸೋಸಿಯೇಶನ್ ಏಳು ಮಂದಿ ಸದಸ್ಯರುಳ್ಳ ಸಮಿತಿಯನ್ನು ನೇಮಿಸಿದೆ. ಮೊನ್ನೆ ಸೇರಿದ ತುರ್ತು ಸಭೆಯಲ್ಲಿ ಸಮಿತಿ ರೂಪೀಕರಿಸಲಾಗಿದೆ. ನ್ಯಾಯವಾದಿ ಎ. ಗೋಪಾಲನ್ ನಾಯರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ನ್ಯಾಯವಾದಿಗಳಾದ ಪಿ.ಪಿ. ಶ್ಯಾಮಳಾ ದೇವಿ, ಕುಸುಮ, ವಿನೋದ್, ಸಖೀರ್, ಎ.ಎನ್. ಅಶೋಕ್ ಕುಮಾರ್ ಮೊದಲಾದವರು ಸಮಿತಿಯ ಸದಸ್ಯರಾಗಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕೆಂದು ನಿರ್ದೇಶಿಸಲಾಗಿದೆ. ಬಾರ್ ಅಸೋಸಿಯೇಶನ್‌ಗೆ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಅಸೋಸಿ ಯೇಶನ್ ಸಭೆ ನಡೆಸಿ ಪ್ರತಿವಾದಿ ಯಿಂದ ಸ್ಪಷ್ಟೀಕರಣ ಕೇಳಲು ಪ್ರಯತ್ನಿಸಿತ್ತು. ಆದರೆ ಆರೋಪವಿಧೆ ಯನಾದ ನ್ಯಾಯವಾದಿ  ಸ್ಪಷ್ಟೀಕರಣ ನೀಡಲು ಹಿಂಜರಿದಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page