ದೇರಂಬಳ ಕಾಲು ಸೇತುವೆ ಕುಸಿದು 8 ತಿಂಗಳಾದರೂ ಮರು ನಿರ್ಮಾಣಕ್ಕೆ ಕ್ರಮವಿಲ್ಲ

ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು 8 ತಿಂಗಳು ಕಳೆದರೂ ಮರು ನಿರ್ಮಿಸದಿರು ವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಈಗ ಸಂಚರಿಸು ತ್ತಿದ್ದು, ಇದು ಅಪಾಯ  ಭೀತಿ ಮೂಡಿಸಿದೆ.  ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮಿಸುವ ದೇರಂಬಳದಲ್ಲಿ 2003ರಲ್ಲಿ ಜಿಲ್ಲಾ ಪಂಚಾಯತ್ ನಿಂದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಸೇತುವೆ ಸುಮಾರು 8 ತಿಂಗಳ ಹಿಂದೆ ಮಳೆಗಾಲದಲ್ಲಿ ಕುಸಿದು ಬಿದ್ದಿದೆ. ಈ ವೇಳೆ ಜನರ ಸಂಚಾರ ಇಲ್ಲದಿರುವು ದರಿಂದ ದುರಂತ ತಪ್ಪಿಹೋಗಿರು ವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿ ದ್ದರೂ ನಿರ್ಮಾಣಕ್ಕೆ ಕ್ರಮವಿಲ್ಲದಿ ರುವುದು ಊರವರನ್ನು ಸಮಸ್ಯೆಗೆ ಸಿಲುಕಿಸಿದೆ. ಸಂಚಾರಕ್ಕೆ ತಾತ್ಕಾಲಿಕವಾಗಿ ಸ್ಥಳೀಯರು ಕಂಗಿನಿಂದ ನಿರ್ಮಿಸಿದ ಸಂಕವನ್ನು ಆಶ್ರಯಿಸುತ್ತಿದ್ದು ಇದು ಅಪಾಯ ಕಾರಿಯಾಗಿದೆ. ಇತ್ತೀಚೆಗೆ ಮಹಿ ಯೋರ್ವರು ಆಯತಪ್ಪಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಮೀಂಜ ಪಂಚಾಯತ್‌ನ ದೇರಂಬಳ ನಿವಾಸಿಗಳಿಗೆ ಜೋಡುಕಲ್ಲು ಹಾಗೂ ಬೇಕೂರು ಸರಕಾರಿ ಶಾಲೆಗೆ ಹತ್ತಿರ ದಾರಿಯಾಗಿದ್ದು, ಶಾಲಾ ಮಕ್ಕಳ ಸಹಿತ ಕೆಲಸಗಳಿಗೆ, ಅಂಗಡಿಗಳಿಗೆ ಜನರು ತೆರಳು ತ್ತಿದ್ದಾರೆ. ಹಾಗೆಯೇ ಜೋಡುಕಲ್ಲು, ಮಡಂದೂರು ಸಹಿತ ಈ ಪರಿಸರ ನಿವಾಸಿಗಳಿಗೆ ಚಿರುಗುಪಾದೆ, ಮೀಯ ಪದವು ಪ್ರದೇಶಕ್ಕೂ ಹತ್ತಿರವಾಗಿದೆ. ಹೆಚ್ಚಿನ ಜನರು ಈ ಕಾಲು ಸೇತುವೆಯನ್ನೇ ಆಶ್ರಯಿಸುತ್ತಿದ್ದಾರೆ.  ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

You cannot copy contents of this page