ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರ ಎಗರಿಸುವಿಕೆ: ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ದಾಖಲುಗೊಂಡಿದ್ದು ೨೦ ಕೇಸುಗಳು; ೧೩ರಲ್ಲೂ ಬಂಧಿತ ಆರೋಪಿ

ಕಾಸರಗೋಡು: ಕಳೆದ ಜನವರಿಯಿಂದ ಆರಂಭಗೊಂಡು ಜಿಲ್ಲೆಯ ವಿವಿಧೆಡೆಗಳಲ್ಲಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ೨೦ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ದಾಖಲು ಗೊಂಡಿವೆ.  ಇದರಲ್ಲಿ ೧೩ರಲ್ಲೂ ನಿನ್ನೆ ಬಂಧಿತನಾದ ಮೂಲತಃ ಮೇಲ್ಪರಂಬ ಕೂವತ್ತೊಟ್ಟಿ ನಿವಾಸಿ ಹಾಗೂ ಈಗ ಕೀಯೂರು ಚೆರಿಯಪಳ್ಳ ಬಳಿಯ ಶಮ್ನಾಸ್ ಮಂಜಿಲ್‌ನ ಮೊಹಮ್ಮದ್ ಶಮ್ನಾಸ್ ಯಾನೆ ಶಮ್ನಾಸ್ (೩೦) ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತನು ಚಿನ್ನದ ಸರ ಎಗರಿಸುವ ಪ್ರಕರಣಗಳಲ್ಲಿ ಮಾತ್ರವಲ್ಲ ಮಾದಕ ದ್ರವ್ಯವಾದ ಎಂಡಿಎಂಎ ಸೇವನೆ  ಮತ್ತು ಕೌಟುಂಬಿಕ ಸಮಸ್ಯೆಯ ಹೆಸರಲ್ಲಿ ಪತ್ನಿಯ ತಲೆಗೆ ಹೊಡೆದು ಗಾಯಗೊಳಿಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾರ ಮೇಲ್ನೋಟದಲ್ಲಿ ಮೇಲ್ಪರಂಬ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ವಿಶೇಷ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.

ಬಿಳಿ ಮತ್ತು ಚಿನ್ನದ ಬಣ್ಣದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿಕೊಂಡು ತಿರುಗಾಡಿ ಜನವಾಸ ಕಡಿಮೆ ಇರುವ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ, ಅದನ್ನು ಬಳಿಕ ಮಾರಾಟ ಮಾಡಿ ಮಜಾ ಉಡಾಯಿಸುವುದು  ಈತನ ದಂzs ಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಚಿನ್ನವನ್ನು ಕಾಸರಗೋಡು, ಎರ್ನಾಕುಳಂ, ಸುಳ್ಯದಲ್ಲಿ ಮಾರಾಟ

ಎಗರಿಸಿ ತೆಗೆಯುವ ಚಿನ್ನವನ್ನು ಆರೋಪಿ ಶಮ್ನಾಸ್ ಕಾಸರಗೋಡು, ಎರ್ನಾಕುಳಂ ಮತ್ತು ಸುಳ್ಯದ ಕೆಲವು ಚಿನ್ನದಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದೂ, ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆರಂಭಿಸಲಾಗಿದೆಯೆಂದು ಪೊಲೀ ಸರು ತಿಳಿಸಿದ್ದಾರೆ. ಎಗರಿಸಿದುದಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಮಾತ್ರವಾಗಿ  ಆರು ಪ್ರಕರಣಗಳಿವೆ. ಕಾಸರಗೋಡು ರೈಲು ನಿಲ್ದಾಣದಲ್ಲಿ  ಓರ್ವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದಲ್ಲೂ ಈತ ಶಾಮೀಲಾಗಿರುವ ಬಂಧಿತನು ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದು, ಆ ಬಗ್ಗೆಯೂ  ತನಿಖೆ ನಡೆಸುತ್ತಿದ್ದಾರೆ.

ದ್ವಿಚಕ್ರ ವಾಹನದ ನಂಬ್ರ ಸರಿಯಾಗಿ ಗೋಚರಿಸದ ರೀತಿಯ ಲ್ಲಾಗಿಸಿ, ಹೆಲ್ಮೆಟ್ ಧರಿಸಿ ಬಂದು ಸರ ಎಗರಿಸುತ್ತಿರುವುದು ಬಂಧಿತನ ಕಳವು ರೀತಿಯಾಗಿದೆ. ಚಿನ್ನ ಎಗರಿಸಲ್ಪಟ್ಟ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಒಟ್ಟು ೨೫೦ ಸಿಸಿ ಟಿವಿಗಳನ್ನು ಪೊಲೀ ಸರು ಪರಿಶೀಲಿಸಿದ್ದಾರೆ. ಅದರಲ್ಲಿ ಕೆಲವೊಂದರಲ್ಲಿ ಆರೋಪಿಯ ಫೋಟೋ ಲಭಿಸಿತ್ತು. ಅದನ್ನು ಪೊಲೀ ಸರು ವಾಟ್ಸಪ್ ಮೂಲಕ ಸಾರ್ವಜನಿ ಕರಿಗೆ ಕಳುಹಿಸಿ ಆರೋಪಿಯ ಪತ್ತೆಗಾರಿರುವ ಯತ್ನ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page