ನಟ ಶಿಯಾಸ್ ಕರೀಮ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಡಿಗೆ: ಚಂದೇರ ಪೊಲೀಸರಿಂದ ಬಂಧನ ಸಾಧ್ಯತೆ

ಚೆನ್ನೈ: ಮಾನಭಂಗ ಪ್ರಕರಣ ದಲ್ಲಿ ಆರೋಪಿಯಾದ ನಟ ಶಿಯಾಸ್ ಖರೀಂನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಡಿಗೆ ತೆಗೆ ಯಲಾಗಿದೆ. ಕೊಲ್ಲಿಯಿಂದ ಹಿಂತಿ ರುಗಿ ಬಂದ ಈತನನ್ನು ಕಸ್ಟಮ್ಸ್ ಸಹಾಯದೊಂದಿಗೆ ಸೆರೆ ಹಿಡಿಯ ಲಾಗಿದೆ. ಕೊಲ್ಲಿಯಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಈತನನ್ನು ಕಸ್ಟಮ್ಸ್ ತಡೆದು ನಿಲ್ಲಿಸಿ ಚಂದೇರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಂದೇರ ಪೊಲೀಸ್ ತಂಡ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿ ಈತನನ್ನು ಬಂಧಿಸಲಿದೆ. ಮಾನಭಂಗ ಪ್ರಕರಣ ದಲ್ಲಿ ಆರೋಪಿಯಾದ ನಟನ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಲಾಗಿತ್ತು. ವಿವಾಹ ಭರವಸೆ ನೀಡಿ ಮಾನಭಂಗ ಪಡಿಸಿರುವುದಾಗಿ ಯೂವತಿ ದೂರು ನೀಡಿದ್ದರು. ಕಾಸರಗೋಡು ಚಂದೇರ ಪೊಲೀಸರು ಶಿಯಾಸ್‌ನ ವಿರುದ್ಧ ಕೇಸು ದಾಖಲಿಸಿದ್ದರು. ಎರ್ನಾ ಕುಳಂನ ಜಿಮ್‌ನಲ್ಲಿ ಹಲವು ವರ್ಷಗಳಿಂದ ತರಬೇತುದಾರೆಯಾಗಿ ಕೆಲಸದಲ್ಲಿದ್ದ ಯುವತಿಯಾಗಿದ್ದಾರೆ ದೂರುದಾತೆ. ಅಲ್ಲಿ ಶಿಯಾಸ್ ಖರೀಂನೊಂದಿಗೆ ಪರಿಚಯಗೊಂಡು ಬಳಿಕ ನಟ ವಿವಾಹ ಭರವಸೆ ನೀಡಿ ತ್ರಿಕರಿಪುರದ ಬಳಿ ಚೆರುವತ್ತೂರು ರಾಷ್ಟ್ರೀಯ ಹೆದ್ದಾರಿಯ ಹೋ ಟೆಲ್‌ವೊಂದರಲ್ಲಿ ದೌರ್ಜನ್ಯ ಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಕಾಸರಗೋಡು ಹೊಸದುರ್ಗ ತಾಲೂಕಿನ ನಿವಾಸಿ ಯಾಗಿದ್ದಾರೆ ದೂರುದಾತೆ. ಇದಲ್ಲದೆ ಶಿಯಾಸ್ ಈಕೆಯಿಂದ ೧೧ ಲಕ್ಷ ರೂ.ವನ್ನು ಕೂಡಾ ಅಪಹರಿಸಿ ರುವುದಾಗಿ ಹೇಳಲಾಗಿದೆ.

You cannot copy contents of this page