ನವೆಂಬರ್‌ನಲ್ಲಿ ಸ್ಕೂಲ್ ಒಲಿಂಪಿಕ್ಸ್: 1 ಲಕ್ಷ ಮಂದಿ ಭಾಗಿ- ಸಚಿವ

ಕಾಸರಗೋಡು: ರಾಜ್ಯದಲ್ಲಿ ಸ್ಕೂಲ್ ಒಲಿಂಪಿಕ್ಸ್ ನಡೆಸಲಾಗುವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಕೊಚ್ಚಿಯಲ್ಲಿ ಸ್ಕೂಲ್ ಒಲಿಂಪಿಕ್ಸ್ ನಡೆಯಲಿದೆ. ಇದರಲ್ಲಿ ಅಂಡರ್ 14, 17 ಮತ್ತು 19 ಎಂಬೀ ಮೂರು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಸಲಾಗುವುದು. ಇದರಲ್ಲಿ ರಾಜ್ಯದ ವಿವಿಧ ಶಾಲೆಗಳಿಂದ ಆಯ್ದ ಕ್ರೀಡಾಪ್ರತಿಭೆಗಳಾದ 2400  ವಿದ್ಯಾರ್ಥಿಗಳು ಭಾಗವಹಿಸುವರು. 14 ವಿಭಾಗಗಳಲ್ಲಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಒಟ್ಟು ೮ ದಿನಗಳ ತನಕ ಈ ಕಾರ್ಯಕ್ರಮ ಮುಂದುವರಿಯಲಿದೆ. 

You cannot copy contents of this page