ನಿಗೂಢ ರೀತಿಯಲ್ಲಿ ವ್ಯಕ್ತಿ ಸಾವು : ತಲೆಯ ಗಾಯ ಮರಣಕ್ಕೆ ಕಾರಣ

ಮುಳ್ಳೇರಿಯ: ಕುಟುಂಬ ಸದಸ್ಯರೊಂದಿಗೆ ವಿಷು ಆಚರಣೆಯಲ್ಲಿ ಪಾಲ್ಗೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿ ದಾರಿಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆಯ ತನಿಖೆ ಮುಂದುವರಿಯುತ್ತಿದೆ. ಮೃತದೇಹದ ಪರೀಕ್ಷೆಯಲ್ಲಿ ತಲೆಗೆ ಗಂಭೀರ ಗಾಯವಾಗಿರುವುದರಿಂದ ರಕ್ತ ಹರಿದಿರುವುದೇ ಸಾವಿಗೆ ಕಾರಣವೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಇದೇ ವೇಳೆ ಆರೋಪಿಯ ಅಂಗಿ ಬದಲಾಗಿರುವುದು ಕೂಡಾ ನಿಗೂಢತೆಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಧರಿಸಿದ ಅಂಗಿಯಲ್ಲ ಮೃತದೇಹದಲ್ಲಿ ಇದ್ದಿರುವುದೆಂದು ಸಂಬಂಧಪಟ್ಟವರು ತಿಳಿಸಿದ್ದು, ಆದರೆ ಇದು ಸರಿಯಲ್ಲವೆಂದು ಪೊಲೀಸರು ಸೂಚಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವಿಷು ದಿನದಂದು ರಾತ್ರಿ ೧೦ ಗಂಟೆವರೆಗೆ ಸಹೋದರನ ಮನೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೋವಿಕ್ಕಾನ ಬಳಿಯ ಇರಿಂಜೇರಿ ಚಕ್ಲಿಯ ಕಾಲನಿ ನಿವಾಸಿ ಪದ್ಮನಾಭ (೬೦) ತನ್ನ ಮನೆಗೆ ತೆರಳುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಿಗೂಢತೆ ಕಂಡು ಬಂದ ಕಾರಣ ಮೃತದೇಹವನ್ನು ತಜ್ಞ ಪರಿಶೀಲನೆಗಾಗಿ ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಪರಿಶೀಲನೆಯಲ್ಲಿ ತಲೆಗೆ ಉಂಟಾದ ಗಾಯದಿಂದ ರಕ್ತ ಹರಿದು ಸಾವು ಸಂಭವಿಸಿರುವುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದರೂ ಮುಂದಿನ ತನಿಖೆ ನಡೆಸುವುದಾಗಿ ಸಂಬಂಧಪಟ್ಟ ಪೊಲೀಸರು ತಿಳಿಸಿದ್ದಾರೆ.

You cannot copy contents of this page