ನೆಕ್ಕರ: ಧೂಮಾವತಿ ದೈವದ ನೇಮೋತ್ಸವ ನಾಳೆ

ಬದಿಯಡ್ಕ: ನೆಕ್ರಾಜೆ ಬಳಿಯ ನೆಕ್ಕರ ಪಡಿಞ್ಞಾರ್ ವೀಡು ಪುದಿಯೋಡನ್ ತರವಾಡಿನಲ್ಲಿ  ಶ್ರೀ ಪಳ್ಳತ್ತ ಧೂಮಾವತಿ ದೈವದ ನೇಮೋತ್ಸವ ನಾಳೆ ನಡೆಯಲಿದೆ. ಇದರ ಅಂಗವಾಗಿ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ನಡೆಯಲಿದೆ.

ಇಂದು ಬೆಳಿಗ್ಗೆ ಗಣಪತಿ ಹೋಮ, ತರವಾಡು ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಪಾನಕ ಪೂಜೆ ನಡೆಯಿತು. ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ರಾತ್ರಿ ೭ಕ್ಕೆ ಭಜನೆ, ೮ಕ್ಕೆ ಶ್ರೀ ದೈವದ ಭಂಡಾರ ತೆಗೆಯುವುದು, ೮.೩೦ಕ್ಕೆ ಅನ್ನದಾನ, ನಾಳೆ ಬೆಳಿಗ್ಗೆ  ೮ಕ್ಕೆ ಶ್ರೀ ಪಳ್ಳತ್ತು ಧೂಮಾವತಿ ದೈವದ ನೃತ್ಯೋತ್ಸವ, ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ಅಪರಾಹ್ನ ೩ಕ್ಕೆ ಶ್ರೀ ಗುಳಿಗ ದೈವದ ಕೋಲ, ೬ಕ್ಕೆ ಭಂಡಾರ ಇಳಿಸುವುದು, ರಾತ್ರಿ ೮.೩೦ಕ್ಕೆ ಕೊರತ್ತಿಯಮ್ಮನಿಗೆ ಸಮ್ಮಾನ ನಡೆಯಲಿದೆ.

You cannot copy contents of this page