ನೌಕರರ ಕೊರತೆಯಿಂದ ಸಮಸ್ಯೆ: ಮಂಗಲ್ಪಾಡಿ ಪಂಚಾಯತ್‌ಗೆ ಬೀಗ ಹಾಕಿದ ಬಿಜೆಪಿ ಸದಸ್ಯರು
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಕಳೆದ ಹಲವು ತಿಂಗಳುಗಳಿAದ ಸಾಕಷ್ಟು ನೌಕರರು ಇಲ್ಲದಿರುವುದರಿಂದ ವಿವಿಧ ಅರ್ಜಿಗಳಿಗಾಗಿ ತುಲುಪುವ ಜನರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಪಂಚಾಯತ್‌ನ ಕೆಲಸಗಳು ನಡೆಯುತ್ತಿಲ್ಲ, ಇದ್ದ ನೌಕರರಿಗೆ ಅನುಭವಿಲ್ಲದಿರುವುದರಿಂದ ಪಂಚಾಯತ್‌ಗೆ ತಲುಪುವ ಜನರು ನಿರಾಶರಾಗಿ ಮರಳ¨ÀೆÃಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್‌ನ ಬಿಜೆಪಿ ಸದಸ್ಯರು ಬುಧವಾರ ಮಧ್ಯಾಹ್ನ ಪಂಚಾಯತ್ ಕಚೇರಿಗೆ ಬೀಗ ಹಾಕಿ ಸುಮರು 45 ನಿಮಿಷಗಳ ಕಾಲ ಪಂಚಾಯತ್ ಕಾರ್ಯದರ್ಶಿ ಹಾಗೂ ನೌಕರರನ್ನು ದಿಗ್ಬಂಧನಗೊಳಿಸಿ ದ್ದಾರೆ. ಇತ್ತೀಚೆಗೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪಂಚಾಯತ್ ಕಚೇರಿಗೆ ಸೂಚನ ಪ್ರತಿಭಟನೆ ನಡೆಸಿದರೂ ಆಡಳಿತ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಲಿಲ್ಲವೆÀAದು ಆರೋಪಿಸಿ ದಿಗ್ಬಂಧನ ನಡೆಸಲಾಗಿದೆ.
ಜಿಲ್ಲಾ ಜೊಯಿಂಟ್ ಡೈರೆಕ್ಟರ್ ನೀಡಿದ ಪರಿಹಾರ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ಚಳವಳಿ ನಿಲ್ಲಿಸಿದೆ. ಪಂಚಾಯತ್‌ನ 18ನೇ ವಾರ್ಡ್ ಸದಸ್ಯ ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕಿಶೋರ್ ಬಂದ್ಯೋಡು, ರೇವತಿ ಚೆರುಗೋಳಿ, ಸುಧಾಗಣೇಶ್ ಉಪಸ್ಥಿತರಿದ್ದರು.