ಬಸ್ ಕಂಡಕ್ಟರ್ ನಿಧನ

ಉಪ್ಪಳ: ಅಸೌಖ್ಯ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಕಂಡಕ್ಟರ್ ಮೃತಪಟ್ಟರು.  ವರ್ಕಾಡಿ ಧರ್ಮನಗರ ನಿವಾಸಿ  ಬಾಬು ಪೂಜಾರಿ-ದಿ| ಕೃಷ್ಣಮ್ಮ ದಂಪತಿಯ  ಪುತ್ರ ಸುಕುಮಾರ (51) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇವರು ತಲಪ್ಪಾಡಿ-ಆನೆಕಲ್ಲು, ಉಪ್ಪಳ-ಕನ್ಯಾನ-ಬಾಯಾರು ರೂಟ್‌ನಲ್ಲಿ ಸಂಚರಿಸುವ  ದುರ್ಗಾಪ್ರಸಾದ್ ಬಸ್‌ನಲ್ಲಿ ಹಲವು ವರ್ಷಗಳಿಂದ ಕಂಡಕ್ಟರ್ ಆಗಿದ್ದರು. ಇತ್ತೀಚೆಗಿನಿಂದ ಇವರಿಗೆ ಅಸೌಖ್ಯ ಬಾಧಿಸಿದ್ದು, ಇದರಿಂದ ಮನೆಯಲ್ಲಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ.

ಮೃತರು ಪತ್ನಿ ಯಶೋಧ, ಪುತ್ರಿ ಶಾನ್ವಿ, ಸಹೋದರಿಯರಾದ ಸುಜಾತ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ತಲಪ್ಪಾಡಿ-ಆನೆಕಲ್ಲು, ಉಪ್ಪಳ-ಬಾಯಾರು ರೂಟ್‌ನಲ್ಲಿ ಸಂಚರಿಸುವ ಬಸ್‌ಗಳ ಮಾಲಕ ಹಾಗೂ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page