ನಾಪತ್ತೆಯಾದ ಬಳಿಕ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ ಮೃತ್ಯು

ಕಾಸರಗೋಡು: ಇಂದು ಬೆಳಿಗ್ಗೆ ಮನೆಯಿಂದ ನಾಪತ್ತೆಯಾಗಿ ಬಳಿಕ  ಮೊಗ್ರಾಲ್ ಕಡವತ್ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್) ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ನಿವಾಸಿ ಶಾಫಿ ಎಂಬವರ ಪುತ್ರನೂ ,   ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕನಾದ ಸವಾದ್ (32) ಎಂಬವರು ಮೃತಪಟ್ಟ ವ್ಯಕ್ತಿ.  ಇವರು ಮೊಗ್ರಾಲ್ ಪುತ್ತೂರು ಒಂದನೇ ಬೂತ್‌ನ ಬಿಎಲ್‌ಒ ಆಗಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಸವಾದ್ ಮನೆಯಿಂದ ನಾಪತ್ತೆಯಾಗಿ ದ್ದರು. ಬಳಿಕ ಮನೆಯವರು ಹಾಗೂ ನಾಗರಿಕರು ಸೇರಿ ಹುಡುಕಾಡುತ್ತಿದ್ದಾಗ ಸವಾದ್‌ರ ಸ್ಕೂಟರ್ ಮೊಗ್ರಾಲ್ ಪುತ್ತೂರು ಸೇತುವೆ ಮೇಲೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ  ಶೋಧ ನಡೆಸಿದಾಗ  ಇವರು ಅಸ್ವಸ್ಥ ಸ್ಥಿತಿಯಲ್ಲಿ  ಮೊಗ್ರಾಲ್ ಕಡವತ್ ಹೊಳೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ಬಳಿಕ ತುರ್ತು ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗ ಲಿಲ್ಲ. ವಿಷಯ ತಿಳಿದು ಪೊಲೀಸರು, ಸ್ನೇಹಿತರು, ನಾಗರಿಕರು ಸಹಿತ ಹಲವಾರು ಮಂದಿ ಜನರಲ್ ಆಸ್ಪತ್ರೆಗೆ ತಲುಪಿದ್ದಾರೆ.  ಮೃತರು ತಾಯಿ ಫೌಸಿಯಾ, ಸಹೋದರಿಯರಾದ ಸಫರಿಯಾ,ಸಫಾನ, ಫಾತಿಮಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page