ಪೆರ್ಲ ಶಾಲೆಯ ಶತಮಾನೋತ್ಸವ: ವರ್ಷಪೂರ್ತಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ

ಪೆರ್ಲ: ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆ ನೂರನೇ ವರ್ಷಕ್ಕೆ ಪದಾರ್ಪಣೆಗೈಯುತ್ತಿದ್ದು, ಶಾಲಾ ಶತಮಾನೋತ್ಸವ ಸಮಾರಂಭವನ್ನು ವರ್ಷಪೂರ್ತಿ ಆಚರಿಸುವ ನಿಟ್ಟಿನಲ್ಲಿ ಶಾಲಾ ಪೂರ್ವ ವಿದ್ಯಾರ್ಥಿಗಳ ಸಭೆ ಯನ್ನು ಶಾಲಾ ಗ್ರಂಥಾಲಯ ಸಭಾಂ ಗಣದಲ್ಲಿ ಆಯೋಜಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಡಾ. ಪ್ರಸನ್ನ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ವರ್ಷಪೂರ್ತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜನವರಿಯಲ್ಲಿ ನಡೆಸುವ ಮೂಲಕ ಪ್ರತಿ ತಿಂಗಳು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಡಿಸೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಸಲು ತೀರ್ಮಾನಿ ಸಲಾಯಿತು.
ಮುಖ್ಯ ಶಿಕ್ಷಕ ಕೆ.ಎನ್. ಕೇಶವ ಪ್ರಕಾಶ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಸಿಬಿಐ ಬೆಂಗಳೂರು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ, ಕೃಷ್ಣರಾಜ್ ಪಿ, ರಾಜಾರಾಮ ಎಸ್. ಪೆರ್ಲ, ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ಶತಮಾನೋತ್ಸವ ಕಾರ್ಯಕ್ರಮದ ಪ್ರಚಾರಾರ್ಥ ವಿಶೇಷ ಲಾಂಛನ ತಯಾರಿ, ಶಾಲಾ ವೆಬ್‌ಸೈಟನ್ನು ಮತ್ತಷ್ಟು ಸಕ್ರಿಯಗೊಳಿಸುವುದು, ಶತಮಾನೋತ್ಸವ ಕಾರ್ಯಕ್ರಮದ ವಾಟ್ಸಪ್ ಗ್ರೂಪ್ ರಚಿಸಿ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಜತೆಗೆ ವರ್ಷಪೂರ್ತಿ ಕಾರ್ಯಕ್ರಮ ದಲ್ಲಿ ವೈದ್ಯಕೀಯ ಶಿಬಿರ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸ ಲಾಯಿತು. ಡಾ. ಕೇಶವ ನಾಯ್ಕ್ ಖಂಡಿಗೆ, ಪಿ.ಅಹಮ್ಮದ್ ಪೆರ್ಲ, ರಾಮಕೃಷ್ಣ ರೈ ಕುದ್ವ, ಡಾ. ಕಿಶೋರ್ ಕುಮಾರ್ ರೈ ಶೇಣಿ, ರಾಜೇಶ್ ಮಾಸ್ಟರ್ ಬಜಕೂಡ್ಲು, ಪುಟ್ಟಪ್ಪ ಖಂಡಿಗೆ, ಉದಯ ಚೆಟ್ಟಿಯಾರ್ ಬಜಕೂಡ್ಲು ಅಭಿಪ್ರಾಯ ಮಂಡಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿ ರಚನಾ ಸಭೆಯನ್ನು ಜ. 12ರಂದು ಸಂಜೆ 3ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಡಾ. ಸತೀಶ್ ಪುಣಿಂಚಿತ್ತಾಯ ಸ್ವಾಗತಿಸಿ, ನಿರೂಪಿಸಿದರು. ವೇಣುಗೋಪಾಲ ಮಾಸ್ಟರ್ ವಂದಿಸಿದರು.

You cannot copy contents of this page