ಪೈವಳಿಕೆಯಲ್ಲಿ ಎ. ಅಬೂಬಕ್ಕರ್ ದ್ವಿತೀಯ ವಾರ್ಷಿಕ ಸಂಸ್ಮರಣೆ

ಪೈವಳಿಕೆ:  ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಹಾಗೂ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ  ಪೈವಳಿಕೆ ನಿವಾಸಿ ಎ. ಅಬೂಬಕರ್ ಅವರ ದ್ವಿತೀಯ ವಾರ್ಷಿಕ ಸಂಸ್ಮರಣೆ ಪೈವಳಿಕೆಯಲ್ಲಿ ಜರಗಿತು. ಸಿಪಿಎಂ ಜಿಲ್ಲಾ  ಕಾರ್ಯಕಾರಿ  ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು.  ಸದಾನಂದ ಕೋರಿಕ್ಕಾರ್ ಅಧ್ಯಕ್ಷತೆ ವಹಿಸಿದರು.  ಶ್ರೀನಿವಾಸ ಭಂಡಾರಿ ಧ್ವಜಾರೋಹಣಗೈದರು. ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಡಿ. ಬೂಬ, ಬೇಬಿ ಶೆಟ್ಟಿ, ಅಬ್ದುಲ್ ಹಾರಿಸ್, ವಿನಯ ಕುಮಾರ್, ಪುರುಷೋತ್ತಮ ಬಳ್ಳೂರು, ಅಶೋಕ್ ಭಂಡಾರಿ, ಡಿ. ಕಮಲಾಕ್ಷ, ಅಬ್ದುಲ್ಲ ಕೆ, ಪಿ.ಕೆ. ಹುಸೈನ್ ಮಾತನಾಡಿದರು. ಚಂದ್ರ ನಾಯ್ಕ ಮಾನಿಪ್ಪಾಡಿ ಸ್ವಾಗತಿಸಿದರು.

You cannot copy contents of this page