ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್  ಪಂದ್ಯಾಟ: ಲಾಂಛನ ಬಿಡುಗಡೆ

ಕುಂಬ್ಡಾಜೆ: ಕುಂಬ್ಡಾಜೆ ಬಂಟರ ಸಂಘದ ವತಿಯಿಂದ ದ. ೨, ೩ರಂದು ಬದಿಯಡ್ಕ ಬೋಳುಕಟ್ಟೆಯಲ್ಲಿ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಬೆಳ್ಳೂರು ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಜಯರಾಜ್ ರೈ ಎಡಮುಗೇರುಗುತ್ತು ಬಿಡುಗಡೆಗೊಳಿಸಿದರು. ಬಂಟರ ಸಂಘದ ಜಿಲ್ಲಾ ಸಮಿತಿ ಸದಸ್ಯ ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಕಿರಣ್ ಮಾಡ, ದೇವಾನಂದ ಶೆಟ್ಟಿ, ಸಂತೋಷ್ ರೈ ಗಾಡಿಗುಡ್ಡೆ, ಸುರೇಶ್ ಶೆಟ್ಟಿ ಮೊಟ್ಟೆಕುಂಜ, ಸಂತೋಷ್ ರೈ ಪುತ್ರಕಳ, ವಸಂತ ಶೆಟ್ಟಿ, ಪ್ರಜ್ವಲ್ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್ ರೈ ಮರತ್ತಿಲ ಸ್ವಾಗತಿಸಿ, ಉಪಾಧ್ಯಕ್ಷ ಹರ್ಷ ರೈ ಬೆಳಿಂಜ ವಂದಿಸಿದರು.

You cannot copy contents of this page