ಬಂಬ್ರಾಣ ಕೊಟ್ಯದ ಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮ ಇಂದಿನಿಂದ

ಉಪ್ಪಳ: ಕುಂಬಳೆ ಬಳಿಯ ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ವಾರ್ಷಿಕ ನೇಮೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. ಇಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ 6ಕ್ಕೆ ಭಜನೆ, ದುರ್ಗಾಪೂಜೆ, ರಾತ್ರಿ 8ಕ್ಕೆ ರಾಹು ಗುಳಿಗ ಬನದಲ್ಲಿ ತಂಬಿಲ, 8.30ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು, 9ಕ್ಕೆ ಸಹ ದೈವಗಳಿಗೆ ಮತ್ತು ಕಲಾಲ್ತ ಗುಳಿಗನ ಕೋಲ, ಅನ್ನಸಂತರ್ಪಣೆ, ನಾಳೆ ಬೆಳಿಗ್ಗೆ 11ರಿಂದ ಶ್ರೀ ಧೂಮಾವತೀ ದೈವದ ಧರ್ಮನೇಮ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಕೊರತಿ ದೈವದ ಕೋಲ, ರಾತ್ರಿ 8ರಿಂದ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಮುಕಾಂಬಿ ಗುಳಿಗ, ಕಲ್ಲುರ್ಟಿ ದೈವಗಳಿಗೆ ತಂಬಿಲ, ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page