ಮಂಜೇಶ್ವರ: ತೀರ್ಥಯಾತ್ರೆಗೆ ತೆರಳಿದ್ದ ಮಂಜೇಶ್ವರ ಮಚ್ಚಂಪಾಡಿ ಪುಚ್ಚತ್ತಬೈಲ್ ನಿವಾಸಿ ಹುಸೈನಾರ್ (58) ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿದೆ. ಅಜ್ಮೀರ್ -ದೆಹಲಿ ತೀರ್ಥಯಾತ್ರೆಗೆಂದು ತೆರಳಿದ್ದ ಇವರು ಈ ತಿಂಗಳ ೧೪ರಂದು ದೆಹಲಿಯ ಜುಮಾ ಮಸೀದಿಯ ೨ನೇ ಗೇಟ್ ಬಳಿಯಿಂದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಪತ್ನಿ ಸಹಿತ ನಾಲ್ಕು ಮಂದಿ ಈ ತಿಂಗಳ 7ರಂದು ಪ್ರಯಾಣ ಆರಂಭಿಸಿದ್ದರು. ಇವರ ತಂಡದಲ್ಲಿ ಒಟ್ಟು 25 ಮಂದಿ ಇದ್ದರು. ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ನಾಪತ್ತೆ ಬಗ್ಗೆ ಮಂಜೇಶ್ವರ ಹಾಗೂ ದೆಹಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹುಸೈನಾರ್ ಬಗ್ಗೆ ಯಾವುದಾದರೂ ಮಾಹಿತಿ ಲಭಿಸಿದರೆ ಮಚ್ಚಂಪಾಡಿ ವಾರ್ಡ್ ಪ್ರತಿನಿಧಿ ಶರೀಫ್ ಪಾವೂರು ಅವರ ೭೫೫೮೯೦೪೯೦೦ ಮೊಬೈರ್ ನಂಬ್ರಕ್ಕೆ ಕರೆ ಮಾಡಿ ತಿಳಿಸಬೇಕೆಂದು ಸಂಬಂಧಿಕರು ಮನವಿ ಮಾಡಿದ್ದಾರೆ.






