ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಕೇಂದ್ರೀಕರಿಸಿ ಹಲವು ವರ್ಷಗಳಿಂದ ನಡೆಯುವ ತಾತ್ಕಾಲಿಕ ನೌಕರರ ನೇಮಕಾತಿ ಹಾಗೂ ವಿಕಲ ಚೇತನ ಪ್ರಮಾಣಪತ್ರ ವಿತರಣೆಯಲ್ಲಿ ಗಂಭೀರ ವಂಚನೆಗಳನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ. ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ ನಾಯರ್ರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ. ಆರ್ಎಸ್ಬಿವೈ ಯೋಜನೆ ಪ್ರಕಾರದ ನೇಮಕಾತಿಗಳಲ್ಲಿ ಹಾಗೂ ಅರ್ಹರಾದ ವಿಕಲಚೇತನರಿಗೆ ಪ್ರಮಾಣ ಪತ್ರ ನೀಡುವಲ್ಲಿ ಮಾನದಂಡಗಳನ್ನು ಉಲ್ಲಂಘಿಸಿ ಭಾರೀ ವಂಚನೆ ನಡೆಸಲಾ ಗಿದೆಯೆಂದು ವಿಜಿಲೆನ್ಸ್ ಪತ್ತೆಹಚ್ಚಿದೆ. 2015ರಿಂದ ಆಸ್ಪತ್ರೆಯಲ್ಲಿ ಆರ್ಎಸ್ಬಿವೈ ಯೋಜನೆಯಡಿಂiiಲ್ಲಿ 20ರಷ್ಟು ತಾತ್ಕಾಲಿಕ ನೌಕರರನ್ನು ನೇಮಿಸುವಲ್ಲಿ ಯಾವುದೇ ಸರಕಾರಿ ಮಾನದಂಡಗಳನ್ನು ಪಾಲಿಸಲಿಲ್ಲವೆಂದು ತಪಾಸಣೆಯಲ್ಲಿ ತಿಳಿದುಬಂದಿದೆ. ನೇಮಕಾತಿ ನಡೆಸುವಾಗ ಎಂಪ್ಲೋಯ್ಮೆಂಟ್ ಎಕ್ಸ್ಚೇಂಜ್ ಮೂಲಕ ಅಥವಾ ಇತರ ಅಧಿಕೃತ ಕ್ರಮಗಳನ್ನು ಪಾಲಿಸಲಿಲ್ಲ. ಅಲ್ಲದೆ ಕಾಲಾವಧಿ ಪೂರ್ತಿಗೊಳ್ಳುವಾಗ ಹೊಸ ವ್ಯಕ್ತಿಗಳಿಗೆ ಅವಕಾಶ ನೀಡದೆ ಕಾನೂನುಗಳನ್ನು ಉಲ್ಲಂಘಿಸಿ ಈ ಹಿಂದೆ ನೇಮಕಾತಿ ಲಭಿಸಿದವರನ್ನೇ ಮತ್ತೆ ನೇಮಿಸಿರುವುದಾಗಿ ವಿಜಿಲೆನ್ಸ್ ಪತ್ತೆಹಚ್ಚಿದೆ. ವಿಕಲಚೇತನರ ಪ್ರಮಾಣಪತ್ರ ವಿತರಣೆಯಲ್ಲಿ ಆದ್ಯತೆ ಯನ್ನು ಬುಡಮೇಲುಗೊಳಿಸಿ ವಿಕಲ ಚೇತನ ಪ್ರಮಾಣಪತ್ರಕ್ಕಾಗಿ ಜನರು ನೀಡುವ ಅರ್ಜಿಗಳನ್ನು ಪರಿಶೀಲಿಸು ವಲ್ಲೂ ಗಂಭೀರ ಲೋಪವುಂಟಾಗಿದೆ ಯೆಂದು ಪತ್ತೆಹಚ್ಚಲಾಗಿದೆ. 2022ರಿಂದ ಇಂತಹ ಅರ್ಜಿಗಳು ಪೂರ್ಣವಾಗಿ ಆನ್ಲೈನ್ ಮೂಲಕ ಸ್ವೀಕರಿಸಲಾಗು ತ್ತಿದೆ. ಆದರೆ ಆನ್ಲೈನ್ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರಿಂಟೌಟ್ ಸಹಿತ ನೇರವಾಗಿ ಕಚೇರಿಗೆ ತಲುಪಿ ಸ್ವಾಧೀನವನ್ನು ಸದುಪಯೋಗ ಪಡಿಸಿದವರ ಅರ್ಜಿಗಳನ್ನು ಮಾತ್ರ ಶೀಘ್ರದಲ್ಲಿ ಮೆಡಿಕಲ್ ಬೋರ್ಡ್ನ ಮುಂದೆ ಹಾಜರುಪಡಿಸಲಾಗುತ್ತಿದೆ. ಇದರ ಫಲವಾಗಿ ಸ್ವಾಧೀನವಿಲ್ಲದ ಸಾಮಾನ್ಯ ಜನರ ಅರ್ಜಿಗಳು ಪರಿಗ ಣಿಸಲ್ಪ ಡುತ್ತಿಲ್ಲ. 2024ರ ನಂತರದ ಹಲವು ಆನ್ಲೈನ್ ಅರ್ಜಿಗಳು ಯಾವುದೇ ತಪಾಸಣೆಯಿಲ್ಲದೆ ಮೆಡಿಕಲ್ ಬೋರ್ಡ್ನ ಮುಂದಿರಿಸದೆ ಈಗಲೂ ಹಾಗೆಯೇ ಉಳಿದುಕೊಂಡಿದೆ. ಆನ್ಲೈನ್ ಆದ್ಯತಾ ಕ್ರಮವನ್ನು ಪೂರ್ಣವಾಗಿ ಬುಡಮೇಲುಗೊಳಿಸಿ ಅಧಿಕಾರಿಗಳು ಹಾರ್ಡ್ ಕೋಪಿಗಳೊಂದಿಗೆ ನೇರವಾಗಿ ತಲುಪುವವರಿಗೆ ಸಹಾಯ ಒದಗಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಎಎಸ್ಐಗಳಾದ ರಿಜೇಶ್, ಸಂತೋಷ್, ಕೆ. ಡೋನ್, ಶ್ರೀಜಿತ್ ಮಡಿಕೈ, ರಾಜೇಶ್ ಮೇಲತ್ತ್ ಎಂಬಿವರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವಿಜಿಲೆನ್ಸ್ ತಂಡದಲ್ಲಿದ್ದರು. ಪತ್ತೆಹಚ್ಚಲಾದ ವಂಚನೆಗಳ ಪೂರ್ಣ ಮಾಹಿತಿಗಳನ್ನು ಸರಕಾರ ಹಾಗೂ ವಿಜಿಲೆನ್ಸ್ ಡೈರೆಕ್ಟರ್ಗಳಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.






