ಬಸ್‌ನಲ್ಲಿ ಏಕಾಂಗಿಯಾಗಿ ಕಂಡು ಬಂದ ಬಾಲಕ: ಹೆತ್ತವರಿಗೆ ಒಪ್ಪಿಸಿದ ಪೊಲೀಸ್
ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ನಿನ್ನೆ ಮಧ್ಯಾ ಹ್ನ ಏಳರ ಹರೆಯದ ಬಾಲಕನೋ ರ್ವ ಏಕಾಂಗಿಯಾಗಿ ಕಂಡು ಬಂದಿದ್ದು ಇದು ಬಸ್ ಸಿಬ್ಬಂದಿಗಳು ಹಾಗೂ ಇತರ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಯಿತು.
ಬಸ್ ನಿರ್ವಾಹಕ ಬಾಲಕ ನನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿಲ್ಲವೆನ್ನಲಾಗಿದೆ. ಇದರಿಂದ ಆತನನ್ನು ಬಸ್ ಸಿಬಂಬಂದಿಗಳು ಉಪ್ಪಳದಲ್ಲಿರುವ ಪೊಲೀಸ್ ಕಂಟ್ರೋಲ್ ರೂಂಗೆ ತಲುಪಿಸಿದ್ದಾರೆ. ಬಳಿಕ ಮಂಜೇಶ್ವರ ಸಿ.ಐ. ರಾಜೀವ್ ಕುಮಾರ್ ಬಾಲಕನನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ಉಳ್ಳಾಲ ಬಳಿಯ ಮಂಜಿಲ ನಿವಾಸಿಯೆಂದು ತಿಳಿದು ಬಂತು. ಇದರಂತೆ ಪೊಲೀಸರು ಬಾಲಕನ ಹೆತ್ತವರನ್ನು ಪತ್ತೆ ಹಚ್ಚಿ ಆತನನ್ನು ಹಸ್ತಾಂತರಿಸಿದರು.