ಬಾಂಗ್ಲಾದ ರೋಹಿಂಗ್ಯಾದವರಿಂದ ಉಗ್ರಗಾಮಿ ಚಟುವಟಿಕೆ: ಹತ್ತು ಕಡೆ ಎನ್ಐಎ ದಾಳಿ
ಬೆಂಗಳೂರು: ಭಾರತದಲ್ಲಿ ಉಗ್ರಗಾಮಿ ಚಟುವಟಿಕ ನಡೆಸಲು ಮತ್ತು ಮಹಿಳೆಯರ ಕಳ್ಳಸಾಗಾಟ ಉದ್ದೇಶದಿಂದ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದಿರುವ ರೋಹಿಂಗ್ಯಾರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೆಂಗಳೂರು ಸೇರಿದಂತೆ ದೇಶದ ೧೦ ಕಡೆಗಳಲ್ಲಿ ಇಂದು ಬೆಳಗ್ಗಿನ ಜಾವ ೩ ಗಂಟೆಯಿಂದ ಏಕಕಾಲದಲ್ಲಿ ದಾಳಿ ಆರಂಭಿಸಿದೆ. ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವ ರೋಹಿಂಗ್ಯಾ ವಲಸೆಗಾರರು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಲಭಿಸಿದನ್ವಯ ಎನ್ಐಎ ಈ ದಾಳಿ ನಡೆಸಿದೆ. ದಾಳಿ ಹಿನ್ನೆಲೆಯಲ್ಲಿ ಎಫ್ಐಆರ್ಗಳನ್ನೂ ಎನ್ಐಎ ದಾಖಲಿಸಿಕೊಂಡಿದೆ. ಈ ಕಾರ್ಯಾಚರಣೆಗೆ ಸಿಬಿಐ ಕೂಡಾ ಎನ್ಐಎಗೆ ಸಾಥ್ ನೀಡುತ್ತಿದೆ.
ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಇತರ ಹಲವು ಪ್ರದೇಶಗಳು, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚ್ಚೇರಿ, ರಾಜಸ್ತಾನ ಮತ್ತು ಜಮ್ಮು-ಕಾಶ್ಮೀರದಲ್ಲೂ ಎನ್ಐಎ ದಾಳಿ ನಡೆಸುತ್ತಿದೆ. ಬೆಂಗಳೂರಿನಿಂದ ಎಂಟು ಬಾಂಗ್ಲಾ ರೋಹಿಂಗ್ಯಾಗಳನ್ನು ಎನ್ಐಎ ವಶಕ್ಕೆ ತೆಗೆದುಕೊಂಡು ಅವರನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದೆ.