ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷೆಯಾಗಿ ಶೋಭಾ ಕರಂದ್ಲಾಜೆ ಆಯ್ಕೆ ಸಾಧ್ಯತೆ

ಬೆಂಗಳೂರು: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೆಚ್ಚಿನಂಶ ಖಚಿತವಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತು ಹರಿದಾಡುತ್ತಿದೆ. ಇಂದು ವಿಜಯದಶಮಿ, ಆ ಬಳಿಕ ಹೈ ಕಮಾಂಡ್ ಹೆಸರು ಖಚಿತಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕರಂದ್ಲಾಜೆ ಆಯ್ಕೆಯಾದರೆ ಅವರು ಈ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯತೆ ಇಲ್ಲ. ಹಾಗಿದ್ದರೆ ಉಡುಪಿ, ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಹೊಸಬರನ್ನು ಆಯ್ಕೆ ಮಾಡಬೇಕಾಗಿ ಬರಲಿದೆ. ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ ಕೆಲವರಲ್ಲಿ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷೆಯಾಗಿ ಆಯ್ಕೆಯಾದರೂ ಕೆಲವರಲ್ಲಿ ಅಸಮಾಧಾನ ಮೂಡುವುದರಲ್ಲಿ ಸಂಶಯವಿಲ್ಲ. ಶೋಭಾ ಕರಂದ್ಲಾಜೆ ಅಥವಾ ನಳಿನ್ ಕುಮಾರ್ ಕಟೀಲ್ ಇಬ್ಬರಿಗೂ ಗಮನಾರ್ಹವಾದ ರೀತಿಯಲ್ಲಿ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲವೆಂಬ ಅಭಿಪ್ರಾಯವಿದ್ದು, ಎಲ್ಲವೂ ಬಿಎಸ್‌ವೈಯವರ ಹೆಸರಲ್ಲಿ ಅಥವಾ ಮೋದಿ ಹೆಸರಲ್ಲಿ ನಿರ್ಧಾರವಾಗುತ್ತಿದೆ ಎಂಬ ಆರೋಪವೂ ರಾಜಕೀಯ ವಲಯದಲ್ಲಿ ಮೂಡಿ ಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page