ಬೈಕ್‌ಗೆ ಕಾರು ಢಿಕ್ಕಿ: ಇಬ್ಬರಿಗೆ ಗಾಯ
ಮಂಜೇಶ್ವರ: ಬೈಕ್‌ನ ಹಿಂಬದಿಗೆ ಕಾರು ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ಮಹಿಳೆಯ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬೈಕ್ ಸವಾರರಾದ ಬಾಯಾರು ಬಳ್ಳೂರು ನಿವಾಸಿಗಳಾದ ಕೃಷ್ಣ ಆಚಾರ್ಯರವರ ಪುತ್ರ ಓಂಕಾರ್ ಆಚಾರ್ಯ (21) ಹಾಗೂ ದಾಮೋದರ ಆಚಾರ್ಯರವರ ಪುತ್ರ ರಾಮಚಂದ್ರ ಆಚಾರ್ಯ (55) ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಡಿ. 31ರಂದು ಬೆಳಿಗ್ಗೆ ಮನೆಯಿಂದ ಬೈಕ್‌ನಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದಾಗ ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ.