ಕಾಸರಗೋಡು: ಬೈಕ್ನಲ್ಲಿ ಸಾಗಿ ಸುತ್ತಿದ್ದ ೪.೨೯೭ ಗ್ರಾಂ ಮಾದಕ ದ್ರವ್ಯ ವಾದ ಎಂಡಿಎಂಎಯನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಈ ಸಂಬಂಧ ಕರ್ನಾಟಕ ಪುತ್ತೂರು ಕಬಕ ವಿದ್ಯಾಪುರದ ಮುಸ್ತಫಾ ಶೇಖ್ (೩೨) ಎಂಬಾತನನ್ನು ಬಂಧಿಸಲಾಗಿದೆ. ಈತ ಚಲಾಯಿಸುತ್ತಿದ್ದ ಕರ್ನಾಟಕ ನೋಂ ದಾವಣೆಯ ಬೈಕ್ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಈತ ಕಳೆದ ಮೂರು ವರ್ಷ ದಿಂದ ಮುಳಿಯಾರು ಬೋವಿಕ್ಕಾನದ ಲ್ಲಿರುವ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದನು. ಟೈಲ್ಸ್ ಕಾರ್ಮಿಕನಾಗಿ ದ್ದನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ ಜೋಸೆಫ್ ಜೆ ನೇತೃತ್ವದ ತಂಡ ಚೆರ್ಕಳ ಪೆಟ್ರೋಲ್ ಬಂಕ್ ಬಳಿ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಯನ್ನು ಮಾಲು ಸಹಿತ ಬಂಧಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ರಾಜೇಶ್ ಪಿ, ಮುರಳೀಧರನ್ ಎಂ ಮತ್ತು ಅತುಲ್ ಟಿ.ವಿ ಎಂಬಿವರು ಒಳಗೊಂಡಿದ್ದರು.