ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಸಭೆ ಜುಲೈ 6ರಂದು
ಮಧೂರು: ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ಜುಲೈ 6ರಂದು ಬೆಳಿಗ್ಗೆ 10.30ಕ್ಕೆ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ.
ಕುಳೂರು ಸದಾಶಿವ ಶೆಟ್ಟಿ ಕನ್ಯಾನ ಇವರ ಮಾರ್ಗದ ರ್ಶನದಲ್ಲಿ ನಡೆಯುವ ಸಭಯಲ್ಲಿ ಡಾ| ಬಿ.ಎಸ್.ರಾವ್ ಅಧ್ಯಕ್ಷತೆ ವಹಿಸುವರು. ವಿವಿಧ ಮಠಾಧೀಶರು, ದೇವಸ್ವಂ ಮಂಡಳಿ ಅಧಿಕಾರಿಗಳು, ವಿವಿಧ ಸಮಿತಿಗಳ ಕಾರ್ಯಕರ್ತರು ಭಾಗವಹಿಸುವರು.
2025 ಮಾರ್ಚ್ 27ರಿಂದ ಎಪ್ರಿಲ್ 7ರ ವರಗೆ ನಡೆಯುಲಿರುವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಕೈಗೊಳ್ಳಬೇಕಾದ ವಿವಿಧ ಸಿದ್ಧತೆಗಳಕುರಿತು ಸಭಯಲ್ಲಿ ನಿರ್ಧರಿಸಲಾಗುವುದು. ಅದೇ ರೀತಿ ಪಂಚಾಯತ್ ಸಮಿತಿಗಳ ರೂಪೀಕರಣ, ಪ್ರಚಾರ ಕುರಿತು ಚಿಂತನೆ ನಡೆಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇ ಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.