ಮಹಿಳೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕುಟ್ಟಿಕ್ಕೋಲು ಕಲ್ಕರ ಹೌಸಿನ ಎಲುಂಬನ್ ಎಂಬವರ ಪತ್ನಿ ಕೊಟ್ಟಿ (೮೧) ನಿನ್ನೆ ಅವರ ಮನೆ ಪಕ್ಕದ ಮರವೊಂ ದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೇಡಗಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು. ಮೃತರು ಮಕ್ಕಳಾದ ಗೋಪಾಲನ್, ನಾರಾಯಣನ್, ಕುಂಞಿರಾಮನ್, ಸರೋಜಿನಿ, ಸೊಸೆಯಂದಿರಾದ ಮಾಧವಿ, ನಾರಾಯಣಿ, ಶ್ಯಾಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.