ಒಬಿಸಿ ಮೀಸಲಾತಿಯನ್ನು ಏಕೀಕರಿಸಲು, ಪಟ್ಟಿಯನ್ನು ಲೋಪದೋಷರಹಿತವಾಗಿಸಲು ಎಚ್‌ಎಸ್‌ಎಸ್‌ವಿ ಆಗ್ರಹ

ಮಂಜೇಶ್ವರA: ಮಂಜೇಶ್ವರದಲ್ಲಿ ನಡೆದ ಹಿಂದೂ ಸಮುದಾಯ ಸೌಹೃದವೇದಿ ಕಾಸರಗೋಡು ಜಿಲ್ಲಾ ಸಮಾವೇಶವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವ. ಪಯ್ಯನ್ನೂರ್ ಶಾಜಿ ಉದ್ಘಾಟಿಸಿದರು. ಕೇರಳ-ಕೇಂದ್ರ ಒಬಿಸಿ ಪಟ್ಟಿಯಲ್ಲಿರುವ ಕಾಗುಣಿತ ಲೋಪ ದೋಷ ಗಳನ್ನು ಸರಿಪಡಿಸಬೇಕು ಮತ್ತು ರಾಜ್ಯ, ರಾಷ್ಟ್ರೀಯ ಸರಕಾರಗಳು ದೋಷರಹಿತ ಒಬಿಸಿ ಪಟ್ಟಿಯನ್ನು ಮರು ಪ್ರಕಟಿಸಲು ಸಿದ್ಧರಾಗಿರಬೇಕು ಎಂದು ಸಭೆ ಒತ್ತಾಯಿ ಸಿತು. ವಾಣಿಯ- ಗಾಣಿಗ, ತೀಯ, ಪದ್ಮಶಾಲಿಯ, ವೇಳುತೇಡತ್ತ್ ನಾಯರ್, ಕೋಟೆಯಾರ್ (ರಾಮ ಕ್ಷತ್ರಿಯ), ಯೋಗಿ, ಹೆಗಡೆ, ಭಂಡಾರಿ, ಮಣಿಯಾಣಿ, ಗಟ್ಟಿ ಮೊದಲಾದ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನೂತನ ಜಿಲ್ಲಾ ಅಧ್ಯಕ್ಷರಾಗಿ ಹರಿಶ್ಚಂದ್ರ ಮಂಜೇಶ್ವರ, ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಗಟ್ಟಿ ದೇವಿ ನಗರ, ಕೋಶಾಧಿಕಾರಿಯಾಗಿ ಯೋಗೀಶ್, ಉಪಾಧ್ಯಕ್ಷರಾಗಿ ಪಿ.ವಿ. ಉಷಾ, ನಾರಾಯಣನ್, ಶೋಭಾ, ಪ್ರಕಾಶ್, ಪಿ.ವೈ. ಕುಂಞÂಕೃಷ್ಣನ್, ಕಾರ್ಯದರ್ಶಿಗಳಾಗಿ ಪುರುಷೋ ತ್ತಮನ್, ರಮ್ಯಾ ಮತ್ತು ಪೂರ್ಣಿಮಾ ಆಯ್ಕೆಯಾದರು. ರಾಜ್ಯ ಕಾರ್ಯಾಧ್ಯಕ್ಷ ರಾಮಕೃಷ್ಣನ್ ವಾಳುನ್ನೋರಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ವಿನೋದನ್ ತುರುತ್ತಿ, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಓಮನಾ ಮುರಳಿ ಮತ್ತಿತರರು ಮಾತನಾಡಿದರು.

You cannot copy contents of this page