ಫುಟ್‌ಬಾಲ್ ಪ್ರೇಮಿಗಳಿಂದ ಸ್ಥಾಪಿಸುವ ಫ್ಲೆಕ್ಲ್‌ಬೋರ್ಡ್‌ಗಳಲ್ಲಿ ಹೊಗೆಬತ್ತಿ ಸೇವನೆ ಚಿತ್ರವಿರಬಾರದು- ಡಿಎಂಒ

ಕಾಸರಗೋಡು: ಫಿಫಾ ವಿಶ್ವಕಪ್ ಫುಟ್‌ಬಾಲ್‌ಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಫುಟ್‌ಬಾಲ್ ಪ್ರೇಮಿ ಗಳು ಸ್ಥಾಪಿಸಿದ ಬೋರ್ಡ್ ಗಳಲ್ಲಿ ಹೊಗೆಬತ್ತಿ ಸೇವನೆ ಚಿತ್ರಗಳನ್ನು ಉಪಯೋಗಿಸ ಬಾರದೆಂದು ಜಿಲ್ಲಾ ವೈದ್ಯಾಧಿ ಕಾರಿ ಡಾ. ಬಿ. ಸಂತೋಷ್ ತಿಳಿಸಿದ್ದಾರೆ. ಹೊಗೆಬತ್ತಿ ಸೇವಿಸುವ ಕ್ರೀಡಾಪಟುಗಳು ಒಳಗೊಂಡಿರುವ ಫ್ಲೆಕ್ಸ್ ಬೋರ್ಡ್‌ಗಳನ್ನು ಸ್ಥಾಪಿಸಲಾ ಗಿದೆ ಎಂಬುದು ಗಮನಕ್ಕೆ ಬಂದಿರುವುದಾಗಿಯೂ ಈ ರೀತಿಯ ಬೋರ್ಡ್‌ಗಳನ್ನು ತೆರವುಗೊಳಿಸುವುದು ಅಥವಾ ದೃಶ್ಯಗಳನ್ನು ಮರೆಮಾಚ ಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇಲ್ಲದಿದ್ದರೆ ರಾಷ್ಟ್ರೀಯ ಹೊಗೆಬತ್ತಿ ಸೇವನೆ ನಿಯಂತ್ರಣ ಕಾನೂನು ಪ್ರಕಾರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಅಲ್ಲದೆ ಹೊಗೆಬತ್ತಿ ಸೇವನೆ ಯನ್ನು ಪ್ರೋತ್ಸಾಹಿಸುವ ವ್ಯಕ್ತಿ ಗಳು, ಕ್ಲಬ್‌ಗಳು, ಬೋರ್ಡ್ ನೆಲೆಗೊಂಡಿರುವ ಸ್ಥಳದ ಮಾಲಕ, ಪ್ರಿಂಟಿಂಗ್ ಸಂಸ್ಥೆಗಳು ಎಂಬಿವುಗಳ ವಿರುದ್ಧವೂ ಕಾನೂನು ಕ್ರಮ ಉಂಟಾಗಬಹು ದೆಂದು ಅವರು ಎಚ್ಚರಿಸಿದ್ದಾರೆ.

You cannot copy contents of this page