ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಯುವಕ ನೋರ್ವ ಬಾಡಿಗೆ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕಾನಕ್ಕೋಡಿನ ಬಾಡಿಗೆ ಮನೆಯಲ್ಲಿ ವಾಸಿಸುವ ರಂಜಿತ್ (೩೭) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಾಸರಗೋಡು  ಆಲಂಪಾಡಿ ನಿವಾಸಿಯಾದ ಇವರು ಅಲ್ಪ ಕಾಲದಿಂದ ಕಾನಕ್ಕೋಡಿನ ಬಾಡಿಗೆ ಮನೆಯಲ್ಲಿ  ಕುಟುಂಬ ಸಹಿತ ವಾಸಿಸುತ್ತಿದ್ದರು. ರಂಜಿತ್ ಮರ ಕಡಿಯುವ ಕಾರ್ಮಿಕನಾಗಿದ್ದಾರೆ. ಕಳೆದ ಎರಡು ದಿನಗಳಿಂದ ರಂಜಿತ್ ಮಾತ್ರವೇ ಈ ಮನೆಯಲ್ಲಿದ್ದರೆನ್ನ ಲಾಗಿದೆ.  ಇಂದು ಬೆಳಿಗ್ಗೆ ಮನೆಯ ಮಾಲಕ ಶಂಸುದ್ದೀನ್ ಎಂಬವರು ತಲುಪಿ ರಂಜಿತ್‌ರನ್ನು ಕರೆದರೂ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ ಬಾಗಿಲು ತೆರೆದು ನೋಡಿದಾಗ ರಂಜಿತ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಆದೂರು ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಮೃತರು ಪತ್ನಿ ಸವಿತ, ಮಕ್ಕಳಾದ ಶ್ರೀದೇವ್, ಶ್ರೀವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page