ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಯುವಕನೋರ್ವ ಮನೆ ಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ವತೀರ್ಥ ಸಮುದ್ರ ಕಿನಾರೆ ಬಳಿ ವಾಸಿಸುವ ದಿ| ನಾರಾಯಣ ಕಾರ್ನವ ಐಲ ಎಂಬವರ ಪುತ್ರ ದಿವ್ಯಮಣಿ (೪೩) ಮೃತಪಟ್ಟ  ವ್ಯಕ್ತಿಯಾಗಿದ್ದಾರೆ. ಇವರು ವೆಲ್ಡಿಂಗ್ ಕಾರ್ಮಿಕನಾಗಿದ್ದರು. ಇವರ ಪತ್ನಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ನೌಕರೆಯಾಗಿದ್ದು ಅವರು ನಿನ್ನೆ ಕೆಲಸಕ್ಕೆ ತೆರಳಿದ್ದರು. ಇದರಿಂದ ನಿನ್ನೆ ಹಗಲು ದಿವ್ಯಮಣಿ ಮಾತ್ರವೇ ಮನೆಯಲ್ಲಿದ್ದರು. ಮಧ್ಯಾಹ್ನ ವೇಳೆ ಸ್ಥಳೀಯ ನಿವಾಸಿಯಾದ ಸಂಬಂಧಿಕರೊಬ್ಬರು ದಿವ್ಯಮಣಿಯ ಮನೆಗೆ ತೆರಳಿದ್ದಾರೆ ನ್ನಲಾಗಿದೆ. ಈ ವೇಳೆ ದಿವ್ಯಮಣಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿಸಲಾಗಿದೆ.  ಕೂಡಲೇ ಸ್ಥಳೀಯರನ್ನು ಸೇರಿಸಿ ದಿವ್ಯಮಣಿಯನ್ನು ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ಬಳಿಕ ಮೃತದೇ ಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.  ಮೃತರು ತಾಯಿ ಲೀಲಾವತಿ, ಪತ್ನಿ  ರೋಹಿಣಿ, ಸಹೋದರಿಯ ರಾದ ಅನ್ನಪೂರ್ಣ, ಕವಿತ, ವಿಜಯ ಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page