ಅಡ್ಯನಡ್ಕ: ಯುವತಿಯೋರ್ವೆ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಪುತ್ತೂರು ಕಡಬ ನಿವಾಸಿ ಹಾಗೂ ಅಡ್ಯನಡ್ಕ ಚವರ್ಕಾಡ್‌ನಲ್ಲಿ ವಾಸಿಸುತ್ತಿರುವ ನರಸಿಂಹ ಭಟ್-ಸಾವಿತ್ರಿ ದಂಪತಿ ಪುತ್ರಿ ಹಾಗೂ ಭೀಮೇಶ್ ಎಂಬವರ ಪತ್ನಿ ವಿ. ವಿನುತ (೩೬) ಸಾವನ್ನಪ್ಪಿದ ಯುವತಿ. ಇವರು ನಿನ್ನೆ ಮಧ್ಯಾಹ್ನ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತರು ಮಕ್ಕಳಾದ ಸಿಂಚ ನಗಂಗಾ, ಸುಪ್ರಭಾ, ಸಹೋದರ ವಿನಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಬದಿಯಡ್ಕ ಪೊಲೀಸರು ತನಿಖೆ ನಡೆಸಿದರು. ಮೃತದೇಹ ವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು