ಶವಾಗಾರದಲ್ಲಿರಿಸಿದ ವ್ಯಕ್ತಿಗೆ ಪುನರ್ಜನ್ಮ
ಕಣ್ಣೂರು: ನಿಧನಹೊಂ ದಿದರೆಂದು ಕೊಂಡು ಶವಾಗಾರಕ್ಕೆ ತಲುಪಿಸಿದ ವ್ಯಕ್ತಿಗೆ ಜೀವವಿದೆಯೆಂದು ತಿಳಿದುಬಂದಿದೆ. ಕಣ್ಣೂರು ಕಲಾತ್ ಎಕೆಜಿ ಸಹಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕೂತುಪರಂಬು ಪಾಚಪೊಯಿಗ ಮಹಿಳಾ ಬ್ಯಾಂಕ್ ಸಮೀಪ ನಿವಾಸಿ ವೆಳ್ಳುವಕಂಡಿ ಪವಿತ್ರನ್ (67)ರಿಗೆ ಪುನರ್ಜನ್ಮ ಲಭಿಸಿದೆ. ಆಸ್ಪತ್ರೆಯ ಸಿಪಾಯಿಯ ಜಾಗ್ರತೆಯಿಂದ ವೃದ್ಧರಿಗೆ ಜೀವವಿ ದೆಯೆಂಬ ವಿಷಯ ತಿಳಿದುಬಂತು. ಶವಾಗಾರದಲ್ಲಿರುವ ಮೃತದೇಹಕ್ಕೆ ಜೀವವಿದೆಯೆಂದು ಸಿಪಾಯಿ ತಿಳಿದು ಕೊಂಡಿದ್ದು, ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ ಪವಿತ್ರನ್‌ರನ್ನು ಮೊನ್ನೆ ರಾತ್ರಿ ಎಕೆಜಿ ಸಹಕಾರಿ ಆಸ್ಪತ್ರೆಗೆ ತರಲಾಗಿತ್ತು. ಶೀತಲೀಕರಣ ಯಂತ್ರದಲ್ಲಿರಿಸಲು ಆಸ್ಪತ್ರೆಗೆ ತರಲಾಗಿತ್ತು. ಆಂಬುಲೆನ್ಸ್‌ನಿಂದ ಶವಾಗಾರಕ್ಕೆ ಕೊಂಡುಹೋಗಲು ಸಿದ್ಧತೆ ನಡೆಸುತ್ತಿದ್ದಾಗ ಅಟೆಂಡರ್‌ಗೆ ಸಂಶಯವುಂಟಾಗಿದೆ. ಕಾಲುಗಳು ಅಲುಗಾಡುತ್ತಿರುವು ದನ್ನು ಅಟೆಂಡರ್ ನೋಡಿದ್ದು ತಪಾಸಣೆ ನಡೆಸಿದಾಗ ನಾಡಿಮಡಿತವಿದೆಯೆಂದು ತಿಳಿದುಬಂತು. ಕೂಡಲೇ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದು, ವೈದ್ಯರು ಬಂದು ನೋಡಿ ಜೀವವಿದೆಯೆಂದು ಖಚಿತಪಡಿಸಿ ತುರ್ತು ಚಿಕಿತ್ಸಾ ವಿಭಾ ಗಕ್ಕೆ ಬದಲಿಸಲಾಯಿತು.
ಪವಿತ್ರನ್‌ರ ಮನೆಯಲ್ಲಿ ಅಂತ್ಯಕ್ರಿಯೆಯ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದ ಮಧ್ಯೆ ಈ ವಿಷಯ ತಿಳಿದುಬಂದಿದೆ. ನಿನ್ನೆಯ ಪತ್ರಿಕೆಗಳಲ್ಲಿ ಪವಿತ್ರನ್‌ರ ನಿಧನ ವಾತ್ರೆ ಪ್ರಕಟಗೊಂಡಿದೆ. ಮರಣ ಸುದ್ದಿ ತಿಳಿದು ಪವಿತ್ರನ್‌ರ ಮನೆಗೆ ಜನರು, ಸಂಬಂಧಿಕರು ಬರುತ್ತಿದ್ದ ಮಧ್ಯೆ ಆಶ್ಚರ್ಯಕರವಾದ ಈ ಘಟನೆ ಸಂಭವಿಸಿದೆ. ಪವಿತ್ರನ್ ಈಗ ಮತನಾಡುತ್ತಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.