ಸಂಕಷ್ಟದಲ್ಲಿರುವ ಸಹೋದರಿಯರ ಸಂರಕ್ಷಣೆಗೆ ಉದಾರ ದಾನಿಗಳ ಸಹಾಯಹಸ್ತ ಅಗತ್ಯ
ಬೇಳ: ಕಾರುಣ್ಯ, ದಯೆ, ಪ್ರಾಮಾಣಿಕತೆ ಇನ್ನೂ ಕೈ ಬಿಡದವರಿದ್ದರೆ ಈ ಕಟುಂಬದ ಕಣ್ಣೀರ ಕಥೆಯನ್ನು ತಿಳಿದು ಸಹಾಯ ಮಾಡಬೇಕಾಗಿದೆ. ಅನಾಥರಾದ ಆಶ್ರಯದಾತರಿಲ್ಲದ ಮೂರು ಮಂದಿ ಸಹೋದರಿಯರು ಜೀವ ಉಳಿಸಿಕೊಳ್ಳುವುದಕ್ಕಾಗಿ ಪಡುವ ಪಾಡು ಕಠಿಣ ಹೃದಯಿಗಳನ್ನೂ ಕರಗಿಸದಿರದು. ಮಧುಮೇಹ, ಪಕ್ಷವಾತ ಮೊದಲಾದ ರೋಗಗಳು ತಗಲಿ ಸಂಕಷ್ಟದಲ್ಲಿರುವ ಬಂಟ ಸಮಾಜದ ಲಕ್ಷ್ಮಿ (70), ಪದ್ಮಾವತಿ (65), ರತ್ನ (51)ರಿಗೆ ತುರ್ತು ಸಹಾಯಹಸ್ತ ಬೇಕಾಗಿದೆ.
ಬೇಳ ವಿಷ್ಣುಮೂರ್ತಿನಗರದಲ್ಲಿ ಗುಡಿಸಲೊಂದರಲ್ಲಿ ದಿನ ಕಳೆಯುತ್ತಿರುವ ಇವರಿಗೆ ನೆರೆಮನೆಯ ವಿಶ್ವನಾಥ ಶೆಟ್ಟಿ, ಪಂಚಾಯತ್ ಸದಸ್ಯ, ಸದಾಶಿವ ಭಂಡಾರಿ ಹಾಗೂ ಕೆಲವರ ಸಹಾಯ ಲಭಿಸುತ್ತಿದ್ದು, ಇದುವರೆಗೂ ಬದುಕು ಸವೆಸಿದ್ದಾರೆ. ಸರಿಯಾದ ದಾರಿ ಇಲ್ಲದೆ, ಕುಡಿಯಲು ನೀರೂ ಇಲ್ಲದೆ, ನಾಲ್ಕು ಸೆಂಟ್ಸ್ ಸ್ಥಳದಲ್ಲಿ ಪಂಚಾಯತ್‌ನಿಂದ ಮನೆ ಮಂಜೂರಾದರೂ ಕೆಲಸ ಪೂರ್ತಿಗೊಳಿಸಲಾಗದೆ ಈ ಸಹೋದರಿಯರು ಸಂಕಷ್ಟದಿಂದ ದಿನಕಳೆಯುತ್ತಿದ್ದಾರೆ. ಮನೆಯನ್ನು ಪೂರ್ತಿಗೊಳಿಸಬೇಕಿದ್ದರೆ ಇನ್ನೂ ಎರಡು ಲಕ್ಷ ರೂ.ನಷ್ಟು ವೆಚ್ಚ ಅಗತ್ಯವಿದ್ದು, ದಿನನಿತ್ಯದ ಖರ್ಚು, ಔಷಧಿ ವೆಚ್ಚಕ್ಕೆ ತಡಕಾಡಬೇಕಾದ ಪರಿಸ್ಥಿತಿಯಲ್ಲಿ ಮನೆ ನಿರ್ಮಾಣ ಕನಸಾಗಿಯೇ ಉಳಿದಿದೆ.ಈಗ ಸಮೀಪದ ವ್ಯಕ್ತಿಯೊಬ್ಬರು ತನ್ನ ಮನೆಯೊಂದನ್ನು ಬಾಡಿಗೆ ಪಡೆ ಯದೆ ನೀಡಿದ್ದು ಅಲ್ಲಿ ಈ ಸಹೋದರಿ ಯರು ವಾಸವಾಗಿದ್ದಾರೆ. ಹೊರ ಪ್ರಪಂಚದ ಜ್ಞಾನವಿಲ್ಲದ ಅಸಹಾಯP ರಾದ ಇವರಲ್ಲಿ ಮಾತನಾಡಿದರೆ ಅಳುವುದು ಮಾತ್ರ ಗೊತ್ತಿರುವ ಈ ಕುಟುಂಬದ ಬೆಂಗಾವಲಿಗೆ ತುರ್ತು ಸ್ಪಂದಿಸಬೇಕಾಗಿದೆ. ಈ ಕುಟುಂಬಕ್ಕೆ ಸಹಾಯ ಒದಗಿಸುವವರು ಹಿರಿಯರಾದ ಲಕ್ಷ್ಮಿಯವರ ಹೆಸರಲ್ಲಿ ಕರ್ನಾಟಕ ಬ್ಯಾಂಕ್‌ನ (ಖಾತೆ ನಂಬ್ರ 5322500101276701, ಐಎಫ್‌ಸಿ ಕೆಎಆರ್‌ಬಿ 0000532) ಖಾತೆಗೆ ಮೊತ್ತ ಪಾವತಿಸಬ ಹುದೆಂದು ವಿನಂತಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವಿಶ್ವನಾಥ ಶೆಟ್ಟಿಯವರ 8943066991 ಎಂಬ ಮೊಬೈಲ್ ಸಂಖ್ಯೆಯಲ್ಲಿ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.