ಸಂಚರಿಸುತ್ತಿದ್ದ ವೇಳೆ ಟಯರ್ ಪಂಕ್ಚರ್: ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಪಲ್ಟಿ

ಕುಂಬಳೆ: ಸಂಚರಿಸುತ್ತಿದ್ದ ವೇಳೆ ಟಯರ್ ಪಂಕ್ಚರ್ ಆದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು ಅಪಘಾತ ಸಂಭವಿಸಿದೆ. ಕಾರು ಚಾಲಕ ಅದೃಷ್ಟವಶತ್ ಅಪಾಯದಿಂದ ಪಾರಾಗಿದ್ದಾನೆ. ನಿನ್ನೆ ಮಧ್ಯಾಹ್ನ ವೇಳೆ ಕುಂಬಳೆ-ಕೆಎಸ್‌ಟಿಪಿ ರಸ್ತೆಯ ಬಾಸ್ಕರ ನಗರದಲ್ಲಿ ಕಾರು ಅಪಘಾತಕ್ಕೀ ಡಾಗಿದೆ. ಕನ್ನಿಪ್ಪಾಡಿ ಮಲಂಗಾರದ ಜಲೀಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರಿನ ಟಯರ್ ಪಂಕ್ಚರ್‌ಗೊಂಡಿದ್ದು, ಇದರಿಂದ ರಸ್ತೆಯ ಚರಂಡಿಗೆ ಬಿದ್ದಿರುವುದಾಗಿ  ತಿಳಿಸಲಾಗಿದೆ. ಕೂಡಲೇ ಸ್ಥಳೀಯರು ತಲುಪಿ ಕಾರನ್ನು ಮೇಲಕ್ಕೆತ್ತಿ ಜಲೀಲ್‌ರನ್ನು ರಕ್ಷಿಸಿದ್ದಾರೆ.

You cannot copy contents of this page