ಸಂವಿಧಾನ ಸಂರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ- ಅಬ್ದುಲ್ಲ ಕುಟ್ಟಿ

ಮಂಜೇಶ್ವರ : ಸಂವಿಧಾನ ಬಗ್ಗೆ ಮಾತನಾಡಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳಿಗೆ ಯಾವುದೇ ಅರ್ಹತೆ ಇಲ್ಲ.ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದಬ್ಬಾಳಿಕೆ ನಡೆಸಿದ ಸಂವಿಧಾನ ವನ್ನು ಕೊಲೆ ಮಾಡಿದ ಇಂದಿರಾಗಾAದಿ ಕುಟುಂಬಕ್ಕೆ, ದೇಶದ ¸sÁ್ವತಂತ್ರ ್ಯವನ್ನೇ ಒಪ್ಪದೇ ಅಂದು ದೇಶ ವಿರೋಧಿ ಆಗಿದ್ದ ಕಮ್ಯುನಿಸ್ಟ್ ಪಕ್ಷಗಳು ಇಂದು ಸಂವಿಧಾನ ಸಂರಕ್ಷಣೆ ಅಂತ ಕಿರುಚಾಡುವುದು ಸ್ವಯಂ ರಕ್ಷಣೆಯ ನಾಟಕ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಹೇಳಿದರು. ಪೈವಳಿಕೆ ಪಂಚಾಯತ್ ಮಟ್ಟದ ಅಟಲ್ ಬಿಹಾರಿ ವಾಜಪಾಯಿ ಯವರ 100ನೇ ಜನ್ಮ ದಿನದ ಕಾರ್ಯಕ್ರಮ ಕಾಯರ್ ಕಟ್ಟೆ ಬಿಜೆಪಿ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಕುಟುಂಬ ಶ್ರೀ ಯನ್ನು ದೇಶದಲ್ಲಿ ಜಾರಿಗೆ ತಂದವರು ಅಟಲ್ ಜೀ, ಗಲ್ಫ್ ರಾಷ್ಟ್ರ ಗಳಿಗೆ ಹೋಗಿ ದುಡಿಯಲು ಆ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿದವರು ಅಟಲ್ ಜೀ, ಅಧಿಕಾರ ಕ್ಕಿಂತ ತತ್ವ, ಸಿದ್ದಾಂತ ಮುಖ್ಯ ಅಂತ ತೋರಿಸಿದವರು ಅಟಲ್ ಜೀ ಎಂದು ಅವರು ಹೇಳಿದರು. ತ್ರಿವಳಿ ತಲಾಕ್ ನಿಷೇದ, ಜಮ್ಮು ಕಾಶ್ಮೀರ 370ನೇ ವಿಧಿ ರದ್ದು, ಏಕ ನಾಗರೀಕತೆ, ಒಂದು ರಾಷ್ಟ್ರ ಒಂದು ಚುನಾವಣೆ ದೇಶದ ಅಭಿವೃದ್ಧಿಯ ಸಂಕೇತ ಎಂದು ಅವರು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಎ.ಕೆ. ಕಯ್ಯರ್, ಪ್ರಸಾದ್ ರೈ, ಕೆ.ವಿ ಭಟ್, ಯತೀರಾಜ್ ಶೆಟ್ಟಿ, ಪ್ರಶಾಂತ್ ಜೋಡುಕಲ್ಲು, ಸುಬ್ರಹ್ಮಣ್ಯ ಭಟ್ ವಿಘೆÀ್ನÃಶ್ವರ, ಪುಷ್ಪ ಲಕ್ಶ್ಮೀ ಉಪಸ್ಥಿತರಿದ್ದರು. ಲೋಕೇಶ್ ನೋಂಡ ಸ್ವಾಗತಿಸಿ, ಸದಾಶಿವ ಚೇರಾಲ್ ವಂದಿಸಿದರು. ಇದೇ ಸಂದರ್ಭ ಪೈವಳಿಕೆ ಪಂಚಾಯತ್ ಮಾಜಿ ಅಧ್ಯಕ್ಷ, ಎಡರಂಗ ನೇತಾರ ಕೃಷ್ಣರ ಪುತ್ರ ಗಣೇಶರನ್ನು ಬಿಜೆಪಿಗೆ ಸ್ವಾಗತಿ ಸಲಾಯಿತು.

You cannot copy contents of this page