ಸುಬ್ರಹ್ಮಣ್ಯ ನಾಯಕ್ ನಿಧನಕ್ಕೆ ಬಿಜೆಪಿ ಶ್ರದ್ಧಾಂಜಲಿ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ, ಬಿಜೆಪಿ ಕುಂಬಳ ಮಂಡಲ ಸಮಿತಿ ಸದಸ್ಯರು, ಆರ್.ಟಿ.ಐ ಕಾರ್ಯಕರ್ತರಾಗಿದ್ದ ಬಿ. ಸುಬ್ರಹ್ಮಣ್ಯ ನಾಯಕ್‌ರಿಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸ ಲಾಯಿತು.

ಕುಂಬಳ ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ  ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿ ನುಡಿ ನಮನ ಸಲ್ಲಿಸಿದರು. ಮಂಡಲ ಉಪಾಧ್ಯಕ್ಷ ಕೆ. ರಮೇಶ್ ಭಟ್, ಗೋಪಾಲ ಪೂಜಾರಿ, ಶಶಿ ಕುಂಬಳೆ ಉಪಸ್ಥಿತರಿದ್ದರು. ಕುಂಬಳ ಮಂಡಲ ಉಪಾಧ್ಯಕ್ಷ ಕೆ. ಸುಧಾಕರ ಕಾಮತ್ ಸ್ವಾಗತಿಸಿ, ಪಂಚಾಯತ್ ಸದಸ್ಯ ವಿವೇಕಾನಂದ ಶೆಟ್ಟಿ ವಂದಿಸಿದರು.

You cannot copy contents of this page