ಹಜ್ಜ್ ತೀರ್ಥಾಟನೆ 3ನೇ ಹಂತದ ತರಬೇತಿ ನಾಳೆಯಿಂದ

ಕಾಸರಗೋಡು: ರಾಜ್ಯ ಹಜ್ಜ್ ಸಮಿತಿ ವತಿಯಿಂದ ಈ ವರ್ಷ ಹಜ್ಜ್‌ಗೆ ತೆರಳುವವರಿಗಿರುವ ತೃತೀಯ ಹಂತದ ತಾಂತ್ರಿಕ ತರಬೇತಿ ತರಗತಿಗಳು ನಾಳೆಯಿಂದ ಆರಂಭಗೊಳ್ಳಲಿದೆ. ನಾಳೆ ದೇಳಿ ಸಅದಿಯದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಆಟ್ಟಕ್ಕೋಯ ತಂಙಳ್ ಕುಂಬೋಳ್ ನಿರ್ವಹಿಸುವರು. ಹಜ್ಜ್ ಸಮಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಶಂಸುದ್ದೀನ್ ಭಾಗವಹಿಸುವರು. ಕಾಸರಗೋಡು, ಚೆರ್ಕಳ ವಲಯದ ಹಾಜಿಯವರು ಭಾಗವಹಿಸಬೇಕು.

27ರಂದು ಮಂಜೇಶ್ವರ ಮಳ್‌ಹರ್, 28ರಂದು ಕಾಞಂಗಾಡ್ ಬಿಗ್‌ಮಾಳ್, ಮೇ 1ರಂದು ತೃಕರಿಪುರ ನಡಕ್ಕಾವ್‌ನಲ್ಲಿ ತರಗತಿಗಳು ನಡೆಯಲಿದೆ.

You cannot copy contents of this page